Home ಟಾಪ್ ಸುದ್ದಿಗಳು ನನಗೆ ಪಕ್ಷದಲ್ಲಿ ಅನ್ಯಾಯವಾಗಿಲ್ಲ: ಬಿ.ಕೆ. ಹರಿಪ್ರಸಾದ್‌

ನನಗೆ ಪಕ್ಷದಲ್ಲಿ ಅನ್ಯಾಯವಾಗಿಲ್ಲ: ಬಿ.ಕೆ. ಹರಿಪ್ರಸಾದ್‌

ಕೋಲಾರ: ನನನೆ ಕಾಂಗ್ರೆಸ್‌ ಪಕ್ಷದಲ್ಲಿ ಅನ್ಯಾಯ ಆಗಿಲ್ಲ ಎಂದು ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ, ನನಗೆ ವರ್ಕಿಂಗ್‌ ಕಮಿಟಿ ಸದಸ್ಯನ ಸ್ಥಾನ ನೀಡಿದ್ದಾರೆ’. ಇದಕ್ಕಿಂತ ಬೇರೆ ಹುದ್ದೆ ಬೇಕಾ ಎಂದು ಪ್ರಶ್ನಿಸಿದ ಅವರು, ನನಗೆ ಕಾಂಗ್ರೆಸ್‌ನಲ್ಲಿ ಅನ್ಯಾಯ ಆಗಿದೆ ಎಂದು ಅನ್ನಿಸುತ್ತಿಲ್ಲ. ಕೆಲ ಹಳೆಯ ರಾಜಕೀಯ ಕತೆಗಳಿಗೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಆರ್‌ಎಸ್‌ಎಸ್‌ ಚಡ್ಡಿ ವಿಚಾರವಾಗಿ ತಮ್ಮ ಹೆಸರಿಟ್ಟು ಹರಿಪ್ರಸಾದ್‌ ಹೇಳಿಕೆ ನೀಡಿಲ್ಲ ಎಂದು ಸ್ವತ: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉತ್ತರ ಕೊಟ್ಟಿದ್ದಾರೆ‌ ಎಂದು ಹೇಳಿದ್ದಾರೆ.

ನಗರದ ಸಾಯಿಧಾಮ ಹೋಟೆಲ್ ಸಭಾಂಗಣದಲ್ಲಿ ಅತಿ ಹಿಂದುಳಿದ ವರ್ಗಗಳ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಕೂಡ ಎಲ್ಲಿಯೂ ನನ್ನ ವಿರುದ್ಧವಾಗಿ ಏನೂ ಮಾತನಾಡಿಲ್ಲ. ಇವತ್ತಿನ ಸಭೆಯಲ್ಲಿ ಕೂಡ ನನಗೆ ಅನ್ಯಾಯವಾಗಿದೆ ಎಂದು ಯಾರೂ ಹೇಳಿಲ್ಲ. ನಾನು ಈಗಲೂ ರಾಷ್ಟ್ರ ರಾಜಕಾರಣದಲ್ಲಿ ಇರುವ ವ್ಯಕ್ತಿ. ಇಂದಿನ ಸಭೆಯನ್ನು ಪಕ್ಷಾತೀತವಾಗಿ ಕರೆಯಲಾಗಿದೆ. ನಾನೇನು ಪ್ರತ್ಯೇಕವಾಗಿ ಸಭೆ ಮಾಡುತ್ತಿಲ್ಲ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು. ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ದೊರಕಿಸಲು, ಇದೇ ಸಮಯದಲ್ಲಿ ಅವರು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾನತೆ, ಸೌಲಭ್ಯಗಳನ್ನು ಕಲ್ಪಿಸಲು ಜಾತಿ ಮತ್ತು ಜನಗಣತಿ ಸಮೀಕ್ಷೆ ಅತಿ ಅವಶ್ಯ ಎಂದು ಹೇಳಿದರು.

ಅತಿ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಿರುವುದನ್ನು ಸರ್ಕಾರದ ಗಮನಕ್ಕೆ ತರುವುದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ಅದು ಸಾಮಾಜಿಕ ನ್ಯಾಯ ದೊರಕಿಸುವುದು. ಅದು ನಾಯಕನ ಜವಾಬ್ದಾರಿಯಾಗಿದೆ ಎಂದೂ ಬಿಕೆ ಹರಿಪ್ರಸಾದ್ ಪ್ರತಿಪಾದಿಸಿದರು.

Join Whatsapp
Exit mobile version