ನಾನೀಗ ಆರೋಗ್ಯವಾಗಿದ್ದೇನೆ: ಕ್ರಿಕೆಟಿಗ ಮಯಂಕ್ ಅಗರ್ವಾಲ್

Prasthutha|

ಬೆಂಗಳೂರು: ದಿಢೀರ್ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕ ಮಯಂಕ್ ಅಗರವಾಲ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

- Advertisement -


ಈ ಬಗ್ಗೆ ‘ಎಕ್ಸ್’ ಮಾಡಿರುವ ಮಯಂಕ್ ಅಗರ್ವಾಲ್, ನಾನು ಈಗ ಉತ್ತಮವಾಗಿದ್ದೇನೆ. ಕೂಡಲೇ ಹಿಂತಿರುಗಲು ಸಜ್ಜಾಗುತ್ತಿದೆ. ನಿಮ್ಮೆಲ್ಲರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.


ಮಂಗಳವಾರ ನವದೆಹಲಿಯ ಮೂಲಕ ಸೂರತ್ ಗೆ ತೆರಳುವ ವಿಮಾನದಲ್ಲಿ ಪಾನೀಯ ಸೇವಿಸಿದ್ದ ಮಯಂಕ್ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಅಗರ್ತಲಾದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿತ್ತು.

- Advertisement -

Join Whatsapp
Exit mobile version