ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ…: ಝಮೀರ್ ಅಹ್ಮದ್

Prasthutha|

►ನನ್ನ ಸಮುದಾಯ ಕೂಡ ಒಕ್ಕಲಿಗ ಸಮಾಜಕ್ಕಿಂತ ಹೆಚ್ಚು ಪರ್ಸೆಂಟೇಜ್ ಮತಗಳನ್ನು ಹೊಂದಿದೆ: ಶಾಸಕ

- Advertisement -

ಬೆಂಗಳೂರು: ನನಗೂ ಸಿಎಂ ಆಗುವ ಆಸೆ ಇದೆ, ನನ್ನ ಸಮುದಾಯ ಒಕ್ಕಲಿಗ ಸಮಾಜಕ್ಕಿಂತ ಹೆಚ್ಚು ಪರ್ಸೆಂಟೇಜ್ ಮತಗಳನ್ನು ಹೊಂದಿದೆ ಎಂದು ಚಾಮರಾಜಪೇಟೆ ಶಾಸಕ ಝಮೀರ್ ಅಹ್ಮದ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಒಕ್ಕಲಿಗ ಸಮಾಜದ ಬೆಂಬಲದ ಕುರಿತ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರಿಗೂ ಮುಖ್ಯಮಂತ್ರಿಯಾಗಲು ಆಸೆ ಇರುತ್ತದೆ. ಆದರೆ ಒಂದು ಸಮಾಜದಿಂದ ಯಾರೂ ಕೂಡ ಮುಖ್ಯಮಂತ್ರಿಯಾಗಲು ಸಾಧ್ಯ ಇಲ್ಲ. ಎಲ್ಲ ಸಮಾಜದವರ ಬೆಂಬಲಿಸಿದರೆ ಮಾತ್ರ ಮುಖ್ಯಮಂತ್ರಿಯಾಗೋದಕ್ಕೆ ಸಾಧ್ಯ. ನನ್ನ ಸಮುದಾಯ ಕೂಡ ಒಕ್ಕಲಿಗ ಸಮಾಜಕ್ಕಿಂತ ಹೆಚ್ಚು ಪರ್ಸೆಂಟೇಜ್ ಮತಗಳನ್ನು ಹೊಂದಿದೆ. ಈ ಒಂದು ಸಮಾಜ ಮಾತ್ರ ನನಗೆ ವೋಟ್ ಕೊಟ್ಟರೆ ನಾನು ಮುಖ್ಯಮಂತ್ರಿಯಾಗೋದಕ್ಕೆ ಸಾಧ್ಯನಾ? ಎಂದು ಪ್ರಶ್ನಿಸಿದ್ದಾರೆ.



Join Whatsapp