Home ಟಾಪ್ ಸುದ್ದಿಗಳು ಹೈದರಾಬಾದ್ ಗೆ ವಿಶ್ವ ಗ್ರೀನ್ ಸಿಟಿ ಪ್ರಶಸ್ತಿ -2022

ಹೈದರಾಬಾದ್ ಗೆ ವಿಶ್ವ ಗ್ರೀನ್ ಸಿಟಿ ಪ್ರಶಸ್ತಿ -2022

ಹೈದರಾಬಾದ್: ದಕ್ಷಿಣ ಕೊರಿಯಾದ ಜೆಜುವಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಹಾರ್ಟಿಕಲ್ಚರ್ ಪ್ರೊಡ್ಯೂಸರ್ಸ್ (ಎಐಪಿಎಚ್) ರ ಪ್ರತಿಷ್ಠಿತ ‘ವರ್ಲ್ಡ್ ಗ್ರೀನ್ ಸಿಟಿ ಅವಾರ್ಡ್ 2022’ ಅನ್ನು ಹೈದರಾಬಾದ್ ಪಡೆದುಕೊಂಡಿದೆ.

ಅಲ್ಲದೆ ಹೈದರಾಬಾದ್ ಲಿವಿಂಗ್ ಗ್ರೀನ್ ಫಾರ್ ಎಕನಾಮಿಕ್  ರಿಕವರಿ ಅಂಡ್ ಇನ್ ಕ್ಲೂಸಿವ್ ಗ್ರೋತ್ ವಿಭಾಗದಲ್ಲಿ ಮತ್ತೊಂದು ಪ್ರಶಸ್ತಿಯನ್ನು ಗೆದ್ದಿದೆ. ಇದು ಪ್ರಶಸ್ತಿಗಾಗಿ ಆಯ್ಕೆಗೊಂಡ ಏಕೈಕ ಭಾರತೀಯ ನಗರವಾಗಿದೆ.

ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮರಾವ್ ಅವರು ಇಡೀ ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ತಂಡ ಮತ್ತು ವಿಶೇಷ ಮುಖ್ಯ ಕಾರ್ಯದರ್ಶಿ ಎಂ.ಎ. ಮತ್ತು ಯು.ಡಿ. ಅರವಿಂದ್ ಕುಮಾರ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಎಐಪಿಎಚ್ , ವರ್ಲ್ಡ್ ಗ್ರೀನ್ ಸಿಟಿಸ್ ಅವಾರ್ಡ್ಸ್ 2022  ಗಾಗಿ ಆರು ವಿಭಾಗಗಳಲ್ಲಿ ಪ್ರವೇಶಗಳನ್ನು ಆಹ್ವಾನಿಸಿತ್ತು. ಆರು ವಿಭಾಗಗಳಲ್ಲಿ ಒಟ್ಟು 18 ಫೈನಲಿಸ್ಟ್ ಗಳನ್ನು ಆಯ್ಕೆ ಮಾಡಲಾಯಿತು ಮತ್ತು ಅಂತಿಮ ವರ್ಗವಾರು ವಿಜೇತರನ್ನು ಶುಕ್ರವಾರ ಘೋಷಿಸಲಾಯಿತು.

ಆರು ವಿಭಾಗಗಳಲ್ಲಿ , ಜೀವವೈವಿಧ್ಯತೆಗಾಗಿ ಲಿವಿಂಗ್ ಗ್ರೀನ್ (ಕೊಲಂಬಿಯಾ, ಆಸ್ಟ್ರೇಲಿಯಾ, ಫ್ರಾನ್ಸ್), ಲಿವಿಂಗ್ ಗ್ರೀನ್ ಫಾರ್ ಕ್ಲೈಮೇಟ್ ಚೇಂಜ್ (ಟರ್ಕಿ, ಆಸ್ಟ್ರೇಲಿಯಾ, ಮೆಕ್ಸಿಕೊ), ಲಿವಿಂಗ್ ಗ್ರೀನ್ ಫಾರ್ ಹೆಲ್ತ್ ಅಂಡ್ ವೆಲ್ಬಿಯಿಂಗ್ (ಬ್ರೆಜಿಲ್, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ), ಲಿವಿಂಗ್ ಗ್ರೀನ್ ಫಾರ್ ವಾಟರ್ (ಕೆನಡಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ), ಲಿವಿಂಗ್ ಗ್ರೀನ್ ಫಾರ್ ಸೋಷಿಯಲ್ ಕೋಹೆಷನ್ (ಅರ್ಜೆಂಟೀನಾ, ದಕ್ಷಿಣ ಕೊರಿಯಾ, ಫ್ರಾನ್ಸ್) ಮತ್ತು ಲಿವಿಂಗ್ ಗ್ರೀನ್ ಫಾರ್ ಎಕನಾಮಿಕ್ ರಿಕವರಿ & ಇನ್ಕ್ಲೂಸಿವ್ ಗ್ರೋತ್ (ಕೆನಡಾ,  ಇರಾನ್, ಭಾರತ) ದೇಶಗಳು ಆಯ್ಕೆ ಪಟ್ಟಿಯಲ್ಲಿದ್ದವು.

Join Whatsapp
Exit mobile version