ಗುಡಿಸಲಿಗೆ ಬೆಂಕಿ: ನಾಲ್ಕು ಹೆಣ್ಣು ಮಕ್ಕಳು ಸಜೀವ ದಹನ

Prasthutha|

ಲಕ್ನೋ: ಗುಡಿಸಲಿಗೆ ಬೆಂಕಿ ಬಿದ್ದು ನಾಲ್ವರು ಹೆಣ್ಣು ಮಕ್ಕಳು ಸಜೀವ ದಹನಗೊಂಡ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ಸಂಭವಿಸಿದೆ.

- Advertisement -

ಪ್ರಿಯಾಂಶಿ (3), ಮಾನ್ವಿ (6) ಮತ್ತು ನೈನಾ (5) ಸ್ಥಳದಲ್ಲೇ ಮೃತಪಟ್ಟಿದ್ದಾರೆ.ನೀತು (6) ಎಂಬ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.

ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



Join Whatsapp