Home ಟಾಪ್ ಸುದ್ದಿಗಳು ಸೆಗಣಿ ಎರಚಿ ದೀಪಾವಳಿ ಆಚರಿಸಿದ ಗ್ರಾಮಸ್ಥರು!

ಸೆಗಣಿ ಎರಚಿ ದೀಪಾವಳಿ ಆಚರಿಸಿದ ಗ್ರಾಮಸ್ಥರು!

►ಕರ್ನಾಟಕದ ‘ಗೋಮಾತಾ ಪುರ’ದ ಬಗ್ಗೆ ನಿಮಗೆ ಗೊತ್ತೇ?

ಬೆಂಗಳೂರು: ಇಡೀ ದೇಶವೇ ದೀಪಾವಳಿಯನ್ನು ದೀಪ, ಪಟಾಕಿ, ಮೇಣದ ಬತ್ತಿಗಳನ್ನು ಹಚ್ಚಿ ಸಂಭ್ರಮಿಸುತ್ತಿರುವಂತೆಯೇ ಕರ್ನಾಟಕದ ಗ್ರಾಮವೊಂದರ ಜನರು ಈ ಹಬ್ಬವನ್ನು ವಿಚಿತ್ರ ರೀತಿಯಲ್ಲಿ ಆಚರಿಸಿದ್ದಾರೆ.

ಪ್ರತೀ ವರ್ಷವೂ ಪರಸ್ಪರ ಒಬ್ಬರಿಗೊಬ್ಬರು ಸಗಣಿ ಎರಚುತ್ತಾ ಸಗಣಿ ಸ್ನಾನ ಮಾಡಿ ಇಲ್ಲಿನ ಗ್ರಾಮಸ್ಥರು ಹಬ್ಬ ಆಚರಿಸುತ್ತಾರೆ.
ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ‘ಗೋಮಾತಾ ಪುರ’ ಎಂಬ ಗ್ರಾಮಸ್ಥರು ದೀಪಾವಳಿಯನ್ನು ವಿಚಿತ್ರ ಸಂಪ್ರದಾಯದೊಂದಿಗೆ ಆಚರಿಸುತ್ತಿದ್ದಾರೆ.
ಈ ಸ್ಥಳೀಯ ಪದ್ಧತಿಯನ್ನು ‘ಗೊರೆಹಬ್ಬ’ ಎಂದು ಕರೆಯಲಾಗುತ್ತದೆ.

ಗೋವುಗಳಿರುವ ಮನೆಗಳಿಂದ ಸಂಗ್ರಹಿಸುವ ಸೆಗಣಿಯನ್ನು ಗ್ರಾಮಸ್ಥರೆಲ್ಲಾ ಸೇರಿಕೊಂಡು ಬಯಲು ಪ್ರದೇಶದಲ್ಲಿ ಸಂಗ್ರಹಿಸುತ್ತಾರೆ.
ದೀಪಾವಳಿಯ ಮುಕ್ತಾಯದ ದಿನದಂದು ಗೊರೆಹಬ್ಬದಲ್ಲಿ ಭಾಗವಹಿಸಲು ಗ್ರಾಮಸ್ಥರೆಲ್ಲಾ ಇಲ್ಲಿ ಸೇರುತ್ತಾರೆ. ಇಲ್ಲಿ ಒಬ್ಬರಿಗೊಬ್ಬರು ಸಗಣಿ ಎರಚುತ್ತಾ ಕೊನೆಗೆ ಸಗಣಿಯಲ್ಲೇ ಸ್ನಾನ ಮಾಡಿ ಹಿಂತಿರುಗುತ್ತಾರೆ.

ಈ ವಿಚಿತ್ರ ಆಚರಣೆಗೆ ಗ್ರಾಮಸ್ಥರು ನೀಡುವ ಕಾರಣವೆಂದರೆ ತಮ್ಮ ದೇವರು ಬೀರೇಶ್ವರ ಸ್ವಾಮಿಯು ಹಸುವಿನ ಸಗಣಿಯಿಂದ ಜನಿಸಿದ್ದಾನೆ ಎಂದಾಗಿದೆ. ಸಗಣಿ ಎರಚುವುದರೊಂದಿಗೆ ಮಾರಕ ರೋಗಗಳು ವಾಸಿಯಾಗುತ್ತದೆ ಎಂದೂ ಗ್ರಾಮವಾಸಿಗಳು ಹೇಳುತ್ತಾರೆ.

Join Whatsapp
Exit mobile version