Home ಟಾಪ್ ಸುದ್ದಿಗಳು ಕೋವಿಡ್‌ ನಿಯಮ ಉಲ್ಲಂಘಿಸಿ ಉತ್ತರ ಪ್ರದೇಶ, ಉತ್ತರಾಖಂಡ ಗಂಗಾ ನದಿಯಲ್ಲಿ ಸಹಸ್ರಾರು ಮಂದಿಯಿಂದ ಪವಿತ್ರ ಸ್ನಾನ!

ಕೋವಿಡ್‌ ನಿಯಮ ಉಲ್ಲಂಘಿಸಿ ಉತ್ತರ ಪ್ರದೇಶ, ಉತ್ತರಾಖಂಡ ಗಂಗಾ ನದಿಯಲ್ಲಿ ಸಹಸ್ರಾರು ಮಂದಿಯಿಂದ ಪವಿತ್ರ ಸ್ನಾನ!

ನವದೆಹಲಿ : ಉತ್ತರಾಖಂಡದ ಹರಿದ್ವಾರದಲ್ಲಿನ ಗಂಗಾ ನದಿಯಲ್ಲಿ ಭಾನುವಾರ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ಸಹಸ್ರಾರು ಮಂದಿ ಪುಣ್ಯ ಸ್ನಾನ ಮಾಡಿದ ಬಗ್ಗೆ ವರದಿಯಾಗಿದೆ. ಉತ್ತರ ಪ್ರದೇಶದ ಫರೂಕಾಬಾದ್‌ ನಲ್ಲೂ ಇದೇ ಪರಿಸ್ಥಿತಿ ಕಂಡು ಬಂದಿದೆ. ಗಂಗಾ ದಸರಾ ಹಿನ್ನೆಲೆಯಲ್ಲಿ ಸಾವಿರಾರು ಜನರು ಏಕಕಾಲಕ್ಕೆ ನದಿಗಿಳಿದು ಸ್ನಾನ ಮಾಡಿದ್ದಾರೆ.

ಜನರಲ್ಲಿ ಮಾಸ್ಕ್‌ ಕಂಡುಬರುತ್ತಿರಲಿಲ್ಲ. ಫರೂಕಾಬಾದ್‌ ನ ಪಾಂಚಾಲ್‌ ಘಾಟ್‌ ನಲ್ಲಿ ಸಹಸ್ರಾರು ಜನರು ನೀರಿನಲ್ಲಿ ಮುಳುಗಿ ಸ್ನಾನ ಮಾಡಿದ್ದಾರೆ. ಫಾರುಕಾಬಾದ್‌ ಸುತ್ತಮುತ್ತಲ ಜಿಲ್ಲೆಗಳಲ್ಲಿನ ಜನರು ಪ್ರತಿ ವರ್ಷ ಈ ಆಚರಣೆಯಲ್ಲಿ ಭಾಗಿಯಾಗುತ್ತಾರೆ. ಆದರೆ, ಈ ಬಾರಿ ಕೋವಿಡ್‌ ಕಾರಣಕ್ಕೆ ಹೆಚ್ಚು ಜನರು ಸೇರಲಾರರು ಎಂದು ಭಾವಿಸಲಾಗಿತ್ತು.

ಹರಿದ್ವಾರದ ಹರ್‌ ಕೀ ಪೌಡಿ ಘಾಟ್‌ ನಲ್ಲಿ ಇದೇ ಸ್ಥಿತಿ ಕಂಡುಬಂದಿದೆ. ಯಾವುದೇ ದೈಹಿಕ ಅಂತರ ಕಾಯ್ದುಕೊಳ್ಳದೆ ಜನರು ನದಿಯಲ್ಲಿ ಮುಳುಗಿ ಸ್ನಾನ ಮಾಡಿದ್ದಾರೆ.

ಜನರು ಪವಿತ್ರ ಸ್ನಾನವನ್ನು ತಮ್ಮ ಮನೆಗಳಲ್ಲೇ ಮಾಡಿಕೊಳ್ಳುವಂತೆ ನಾವು ವಿನಂತಿಸಿದ್ದೆವು. ಗಡಿಯಲ್ಲಿ ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ದೃಢೀಕರಣ ಪತ್ರ ಇದ್ದವರನ್ನು ಮಾತ್ರ ಬಿಡಲಾಗುತ್ತಿದೆ. ಕೋವಿಡ್‌ ನಿಯಮಗಳನ್ನು ಪಾಲಿಸುವಂತೆ ಜನರನ್ನು ವಿನಂತಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Join Whatsapp
Exit mobile version