ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ ರೀತಿಯ ನೂರಾರು ಪ್ರಕರಣಗಳು ನಡೆದಿವೆ: ಮಣಿಪುರ ಸಿಎಂ

Prasthutha|

ನವದೆಹಲಿ: ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ , ಅತ್ಯಾಚಾರ ರೀತಿಯ ನೂರಾರು ಪ್ರಕರಣಗಳು ನಡೆದಿವೆ, ಹಾಗಾಗಿ ಇಂಟರ್ನೆಟ್ ಬಂದ್ ಮಾಡಿದ್ದೇವೆ ಎಂದು ಮಣಿಪುರ ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ.

- Advertisement -

ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿದ ಅವರು, ಇಲ್ಲಿ ಪ್ರತಿದಿನವೂ ಸಂಘರ್ಷ ನಡೆಯುತ್ತಿದೆ. ತುಂಬಾ ಮಂದಿ ಬಲಿಯಾಗಿದ್ದಾರೆ. ಇದೇ ರೀತಿಯ ಹಲವು ಎಫ್‌ ಐಆರ್ ದಾಖಲಾದ ಬಗ್ಗೆ ಸಂದೇಶ ಬರುತ್ತಿದೆ. ಇಂತಹ ನೂರಾರು ಘಟನೆಗಳು ಮಣಿಪುರದಲ್ಲಿ ಎರಡು ತಿಂಗಳಲ್ಲಿ ನಡೆದಿದೆ. ಈ ವಿಡಿಯೋ ನಿನ್ನೆಯಷ್ಟೇ ಹೊರಗೆ ಬಂದಿದೆ. ಇಲ್ಲಿನ ‘ಗ್ರೌಂಡ್ ರಿಯಾಲಿಟಿ’ ನೋಡಿದ ಬಳಿಕ ನೀವು ಮಾತನಾಡಿ. ನಿಮ್ಮ ಆರೋಪಗಳನ್ನೆಲ್ಲ ಕೇಳಲು ನಾವು ತಯಾರಿಲ್ಲ. ಇದೇ ರೀತಿಯ ನೂರಾರು ಪ್ರಕರಣಗಳು ನಡೆದಿವೆ, ಅದಕ್ಕಾಗಿಯೇ ನಾವು ಇಂಟರ್ನೆಟ್‌ ಸೇವೆಯನ್ನು ಇಲ್ಲಿ ಬಂದ್ ಮಾಡಿದ್ದೇವೆ ಎಂದಿದ್ದಾರೆ.

Join Whatsapp
Exit mobile version