Home ಟಾಪ್ ಸುದ್ದಿಗಳು ಕರ್ನಾಟಕದ ವಿದ್ಯಾರ್ಥಿಗಳು ಹಿಜಾಬ್ ತೆಗೆಯುವಂತೆ ಬಲವಂತಪಡಿಸಿರುವುದು ಅವಮಾನಕರ: ಅಸದುದ್ದೀನ್ ಉವೈಸಿ

ಕರ್ನಾಟಕದ ವಿದ್ಯಾರ್ಥಿಗಳು ಹಿಜಾಬ್ ತೆಗೆಯುವಂತೆ ಬಲವಂತಪಡಿಸಿರುವುದು ಅವಮಾನಕರ: ಅಸದುದ್ದೀನ್ ಉವೈಸಿ

ಹೈದರಾಬಾದ್: ಹಿಜಾಬ್ ಮುಸ್ಲಿಮರ ಮೂಲಭೂತ ಹಕ್ಕಾಗಿದ್ದು, ಧಾರ್ಮಿಕ ಬಾದ್ಯತೆಯ ಭಾಗವಾಗಿ ಹಿಜಾಬ್ ಧರಿಸುವುದನ್ನು ತಡೆಯುವ ಮೂಲಕ ಅವರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಬಿಜೆಪಿ ಪಕ್ಷವು ಮುಸ್ಲಿಮರನ್ನು ಅವಮಾನಿಸುತ್ತಿವೆ ಎಂದು ಸಂಸದ, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ತಿಳಿಸಿದ್ದಾರೆ.

ಕರ್ನಾಟಕದ ಶಾಲೆಯೊಂದರಲ್ಲಿ ಮುಸ್ಲಿಮ್ ವಿದ್ಯಾರ್ಥಿ ಮತ್ತು ಶಿಕ್ಷಕರ ಹಿಜಾಬ್ ಅನ್ನು ಪ್ರವೇಶದ್ವಾರದಲ್ಲಿ ತೆಗೆಯಲು ಬಲವಂತಪಡಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೊಂದು ಅವಮಾನಕರ ನಡೆಯೆಂದು ಸಂಸದ ಅಸದುದ್ದೀನ್ ಉವೈಸಿ ವಿಷಾಧ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರದ ಈ ರೀತಿಯ ಅಮಾನವೀಯ ನಡೆಯನ್ನು ಟೀಕಿಸಿದ ಸಂಸದ ಅಸದುದ್ದೀನ್ ಉವೈಸಿ, ಮುಸ್ಲಿಮರನ್ನು Z ಮಾದರಿಯ ಪ್ರಜೆಗಳನ್ನಾಗಿ ಮಾಡುವ ಮುಂದುವರಿದ ಪ್ರಯತ್ನದ ಭಾಗವೇ ಅಥವಾ ಇಲ್ಲಿ ನನ್ನ ಘನತೆ ಎಲ್ಲಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

Join Whatsapp
Exit mobile version