ಕರ್ನಾಟಕದ ವಿದ್ಯಾರ್ಥಿಗಳು ಹಿಜಾಬ್ ತೆಗೆಯುವಂತೆ ಬಲವಂತಪಡಿಸಿರುವುದು ಅವಮಾನಕರ: ಅಸದುದ್ದೀನ್ ಉವೈಸಿ

Prasthutha|

ಹೈದರಾಬಾದ್: ಹಿಜಾಬ್ ಮುಸ್ಲಿಮರ ಮೂಲಭೂತ ಹಕ್ಕಾಗಿದ್ದು, ಧಾರ್ಮಿಕ ಬಾದ್ಯತೆಯ ಭಾಗವಾಗಿ ಹಿಜಾಬ್ ಧರಿಸುವುದನ್ನು ತಡೆಯುವ ಮೂಲಕ ಅವರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಬಿಜೆಪಿ ಪಕ್ಷವು ಮುಸ್ಲಿಮರನ್ನು ಅವಮಾನಿಸುತ್ತಿವೆ ಎಂದು ಸಂಸದ, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ತಿಳಿಸಿದ್ದಾರೆ.

- Advertisement -

ಕರ್ನಾಟಕದ ಶಾಲೆಯೊಂದರಲ್ಲಿ ಮುಸ್ಲಿಮ್ ವಿದ್ಯಾರ್ಥಿ ಮತ್ತು ಶಿಕ್ಷಕರ ಹಿಜಾಬ್ ಅನ್ನು ಪ್ರವೇಶದ್ವಾರದಲ್ಲಿ ತೆಗೆಯಲು ಬಲವಂತಪಡಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೊಂದು ಅವಮಾನಕರ ನಡೆಯೆಂದು ಸಂಸದ ಅಸದುದ್ದೀನ್ ಉವೈಸಿ ವಿಷಾಧ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರದ ಈ ರೀತಿಯ ಅಮಾನವೀಯ ನಡೆಯನ್ನು ಟೀಕಿಸಿದ ಸಂಸದ ಅಸದುದ್ದೀನ್ ಉವೈಸಿ, ಮುಸ್ಲಿಮರನ್ನು Z ಮಾದರಿಯ ಪ್ರಜೆಗಳನ್ನಾಗಿ ಮಾಡುವ ಮುಂದುವರಿದ ಪ್ರಯತ್ನದ ಭಾಗವೇ ಅಥವಾ ಇಲ್ಲಿ ನನ್ನ ಘನತೆ ಎಲ್ಲಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.



Join Whatsapp