ಹುಬ್ಬಳ್ಳಿ: ವಾಟ್ಸಾಪ್ ಸ್ಟೇಟಸ್ ವಿಚಾರದಲ್ಲಿ ಉಂಟಾದ ವಿವಾದ ಹುಬ್ಬಳ್ಳಿಯಲ್ಲಿ ಗಲಭೆಗೆ ಕಾರಣವಾಗಿತ್ತು. ಬಳಿಕ ಗಲಭೆಯ ರೂವಾರಿಯೆಂದು ಆರೋಪಿಸಿ ಮೌಲ್ವಿ ವಾಸೀಂ ಪಠಾಣ್’ರನ್ನು ಬಂಧಿಸಲಾಗಿತ್ತು. ವಾಸೀಂರ ಮೌಲ್ವಿಯ ಪೊಲೀಸ್ ಕಸ್ಟಡಿ ಇಂದಿಗೆ (ಬುಧವಾರ) ಮುಕ್ಆಯಗೊಂಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಹುಬ್ಬಳ್ಳಿಯ 4ನೇ ಹೆಚ್ಚುವರಿ ನ್ಯಾಯಾಲಕ್ಕೆ ಹಾಜರುಪಡಿಸಲಿದ್ದು,. 11 ಗಂಟೆಯ ವೇಳೆ ಮೌಲ್ವಿ ವಾಸೀಂರನ್ನು ಪೊಲೀಸರು ಕೋರ್ಟ್ಗೆಿ ಕರೆತರಲಿದ್ದಾರೆ. ಕಳೆದ ಏ.21ರಂದು ವಾಸೀಂ’ರನ್ನು ಪೊಲೀಸರು ಕೋರ್ಟ್’ಗೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯವು ವಿಚಾರಣೆಗಾಗಿ 5 ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು.
ಹುಬ್ಬಳ್ಳಿ ಘರ್ಷಣೆಯಲ್ಲಿ ನನ್ನನ್ನು ಸುಖಾಸುಮ್ಮನೆ ರೂವಾರಿಯೆಂದು ಬಿಂಬಿಸಲಾಗಿದೆ. ಪೊಲಿಸರೇ ನನಗೆ ಕರೆ ಮಾಡಿ ಪರಿಸ್ಥಿತಿ ನಿಯಂತ್ರಿಸಲು ಠಾಣೆಗೆ ಬರಲು ಸೂಚಿಸಿದ್ದರು. ಆ ಬಳಿಕ ಮೈಕ್ ಮೂಲಕ ನಾನು ಶಾಂತಿ ಕಾಪಾಡುವಂತೆ ಸೂಚಿಸಿದ್ದೇನೆ, ಆದರೆ ಇದೀಗ ನನ್ನ ವಿರುದ್ಧ ಮಾಸ್ಟರ್ ಮೈಂಡ್ ಆರೋಪ ಹೊರಿಸಲಾಗಿದೆ ಎಂದು ಬಂಧನಕ್ಕೀಡಾಗುವ ಕೆಲ ನಿಮಿಷಗಳ ಮುಂದೆ ಮೌಲ್ವಿ ವಾಸೀಂ ವೀಡಿಯೋ ಮೂಲಕ ಹೇಳಿದ್ದರು.