Home ಟಾಪ್ ಸುದ್ದಿಗಳು ಹುಬ್ಬಳ್ಳಿ: ನೇಹಾ ಮನೆಗೆ ಸಿಐಡಿ ತಂಡ ಭೇಟಿ

ಹುಬ್ಬಳ್ಳಿ: ನೇಹಾ ಮನೆಗೆ ಸಿಐಡಿ ತಂಡ ಭೇಟಿ

ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡ ಇಲ್ಲಿನ ಬಿಡನಾಳದಲ್ಲಿರುವ ಅವರ ಮನೆಗೆ ಗುರುವಾರ ಭೇಟಿ ನೀಡಿ ಮಾಹಿತಿ ಪಡೆಯುತ್ತಿದೆ.

ಸಿಐಡಿ ಎಸ್.ಪಿ. ವೆಂಕಟೇಶ ನೇತೃತ್ವದ ತಂಡ ನೇಹಾ ಅವರ ತಂದೆ ನಿರಂಜನಯ್ಯ ಹಿರೇಮಠ ಮತ್ತು ತಾಯಿ ಗೀತಾ ಅವರಿಂದ ಕಳೆದ ಒಂದು ಗಂಟೆಯಿಂದ ಮಾಹಿತಿ ಕಲೆ ಹಾಕುತ್ತಿದೆ.
ಸಂಚಾರ ಹಾಗೂ ಅಪರಾಧ ವಿಭಾಗದ ಡಿಸಿಪಿ ರವೀಶ್ ಸಿ. ಆರ್., ತನಿಖಾ ತಂಡದ ಜತೆ ಇದ್ದಾರೆ.

Join Whatsapp
Exit mobile version