ಆರ್’ಆರ್’ಆರ್’ಗೆ ಆಸ್ಕರ್ ಗರಿ | ಸಿನಿಮಾ ಬಹಿಷ್ಕರಿಸಲು ಹೇಳಿದ್ದ ಬಿಜೆಪಿ ಧರ್ಮಾಂಧರು ಈಗ ಎಲ್ಲಿದ್ದಾರೆ: ಪ್ರಕಾಶ್ ರಾಜ್

Prasthutha|

ಬೆಂಗಳೂರು: ಆರ್’ಆರ್’ಆರ್ ಸಿನಿಮಾದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಲಭಿಸಿದ ಬೆನ್ನಲ್ಲೇ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದು, ಸಿನಿಮಾವನ್ನು ಬಹಿಷ್ಕರಿಸಲು ಹೇಳಿದ್ದ, ಚಿತ್ರ ಮಂದಿರಗಳನ್ನು ಸುಡುವುದಾಗಿ ಹೇಳಿದ್ದ ಬಿಜೆಪಿಯ ಧರ್ಮಾಂಧರು ಈಗ ಎಲ್ಲಿ ಅಡಗಿಕೊಂಡಿದ್ದಾರೆ ಎಂದು ಸಂಘಪರಿವಾರದ ಕಾಲೆಳೆದಿದ್ದಾರೆ.

- Advertisement -


ಬಿಜೆಪಿಯ ಧರ್ಮಾಂಧರು ಆರ್’ಆರ್’ಆರ್ ಸಿನಿಮಾವನ್ನು ಬಾಯ್ಕಾಟ್ ಮಾಡಲು ಮತ್ತು ಚಿತ್ರ ಮಂದಿರಗಳನ್ನು ಕೆಡವಲು ಬಯಸಿದ್ದರು. ಈಗ ಅವರು ಎಲ್ಲಿ ಅಡಗಿದ್ದಾರೆ. ವಿಸ್ವ ಗುರುವಿನ ಶಿಷ್ಯರು ಆರ್’ಆರ್’ಆರ್ ಸಿನಿಮಾನ ಬ್ಯಾನ್ ಮಾಡಿ, ಚಿತ್ರ ಮಂದಿರಗಳನ್ನು ಕೆಡವ್ತೀವಿ ಅಂದಿದ್ರು. ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಪಾ?” ಎಂದು ವ್ಯಂಗ್ಯ ಮಾಡಿದ್ದಾರೆ.


ಚಿತ್ರದಲ್ಲಿ ಕೋಮರಮ್ ಭೀಮನನ್ನು ಬಿಂಬಿಸಿದ ರೀತಿಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮುಸ್ಲಿಮರು ಧರಿಸುವ ಟೋಪಿಯನ್ನು ಭೀಮನ ಪಾತ್ರಧಾರಿ ಜೂನಿಯರ್ ಎನ್ ಟಿಆರ್’ಗೆ ತೊಡಿಸಿದ್ದಕ್ಕೆ ಆರ್’ಆರ್’ಆರ್ ವಿರುದ್ಧ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಚಿತ್ರಕ್ಕೆ ಅಡ್ಡಿಪಡಿಸುವುದಾಗಿಯೂ ಹೇಳಿದ್ದರು.

- Advertisement -



Join Whatsapp