ಸಕಲೇಶಪುರ | ರಸ್ತೆ ಬದಿಯ ಕ್ಯಾಂಟೀನ್’ಗೆ ನುಗ್ಗಿದ ಲಾರಿ: ಮೂವರು ಮೃತ್ಯು

- Advertisement -

ಸಕಲೇಶಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕ್ಯಾಂಟಿನ್ ಗೆ ನುಗ್ಗಿ ಉರುಳಿಬಿದ್ದ ಪರಿಣಾಮ ಮೂವರು ಮೃತಪಟ್ಟ ಘಟನೆ ಸಕಲೇಶಪುರ ತಾಲೂಕಿನ, ಗುಳಗಳಲೆ ಸಮೀಪ ಸಂಭವಿಸಿದೆ.

- Advertisement -


ಗಾರೆ ಕೆಲಸಕ್ಕಾಗಿ ಬಂದಿದ್ದ ಚಿತ್ರದುರ್ಗ ಮೂಲದ ವೀರೇಶ್ ಮೃತಪಟ್ಟವರು. ವೀರೇಶ್ ಸೇರಿದಂತೆ ಇನ್ನೊಬ್ಬರು ಕ್ಯಾಂಟೀನ್ ನಲ್ಲಿ ಟೀ ಕುಡಿಯುತ್ತಿದ್ದವರು ಸಾವನ್ನಪ್ಪಿದ್ದಾರೆ. ಲಾರಿಯ ಸಿಬ್ಬಂದಿ ಕೂಡಾ ಮೃತಪಟ್ಟಿದ್ದಾರೆ.


ಕ್ಯಾಂಟೀನ್ ನಲ್ಲಿ ಇತರ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಕಲೇಶಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಹೆದ್ದಾರಿಯಲ್ಲಿ ಅತೀ ವೇಗವಾಗಿ ಬರುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟೀನ್ ಗೆ ನುಗ್ಗಿದ್ದು, ಬಳಿಕ ಉರುಳಿಬಿದ್ದಿದೆ.

- Advertisement -


Must Read

Related Articles