Home ಕರಾವಳಿ ಕೋವಿಡ್ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು HRS ಮಹಿಳಾ ತಂಡ ಸಜ್ಜು

ಕೋವಿಡ್ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು HRS ಮಹಿಳಾ ತಂಡ ಸಜ್ಜು

ಮಂಗಳೂರು : ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (HRS) ತಂಡದ ಮಹಿಳಾ ವಿಭಾಗವು ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಸಮಯದಲ್ಲಿ ತುರ್ತು ಪರಿಸ್ಥಿತಿಯನ್ನೆದುರಿಸಲು ಸಜ್ಜಾಗಿದೆ. ಕಳೆದ ಕೋವಿಡ್ ಸಮಯದಲ್ಲೂ HRS ತಂಡವು ತನ್ನ ಸ್ವಯಂ ಸೇವಕರ ಮೂಲಕ ಜಿಲ್ಲೆಯಲ್ಲಿ ಸೇವೆಗೈದಿತ್ತು. ಈ ಬಾರಿ HRS ಜಿಲ್ಲೆಯಲ್ಲಿ ಮಹಿಳಾ ತಂಡಕ್ಕೂ ಚಾಲನೆ ನೀಡಿದೆ.

ಎಚ್.ಆರ್.ಎಸ್ ದಕ್ಷಿಣ ಕನ್ನಡ ಜಿಲ್ಲೆಯ ಒಂಭತ್ತು ಕಡೆಗಳಲ್ಲಿ ಮಹಿಳಾ ತಂಡವನ್ನು ಕಟ್ಟಿ ತರಬೇತಿ ನೀಡಿ ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಸಜ್ಜುಗೊಳಿಸಿದೆ.ಜಿಲ್ಲೆಯ ಏಳು ಪ್ರದೇಶದಲ್ಲಿ ಟೀಮ್ ರಚಿಸಲಾಗಿದ್ದು ಜಿಲ್ಲೆಯ ಗ್ರೂಪ್ ಲೀಡರಾಗಿ ಸುಮಯ್ಯ ಹಮಿದುಲ್ಲಾ , ಮಂಗಳೂರು ನಗರದ ಗ್ರೂಪ್ ಲೀಡರಾಗಿ ಮರ್ಯಮ್ ಶಹೀರ ಮುನ್ನಡೆಸಲಿದ್ದಾರೆ.

ಜಿಲ್ಲೆಯ ಒಂಭತ್ತು ಪ್ರದೇಶದಲ್ಲಿ ಮಹಿಳಾ ನಾಯಕಿಯರ ನೇತೃತ್ವದಲ್ಲಿ ತಂಡ ಸಜ್ಜಾಗಿದೆ. ಮಂಗಳೂರಿನಲ್ಲಿ ರಹಮತ್ ಮನ್ಸೂರ್, ಪಾಣೆ ಮಂಗಳೂರಿನಲ್ಲಿ ಝೋಹರ, ಉಪ್ಪಿನಂಗಡಿಯಲ್ಲಿ ಸಮೀನಾ ಪರ್ವಿನ್, ಉಳ್ಳಾಲದಲ್ಲಿ ಶರೀಫ, ಬಿ.ಸಿ ರೋಡ್ ಹುಮೇರಾ, ಪುತ್ತೂರಿನಲ್ಲಿ ಯಾಸ್ಮೀನ್, ಕೃಷ್ಣಾಪುರ ಯಾಸ್ಮೀನ್, ವಿಟ್ಲದಲ್ಲಿ ಸಫ್ರಾ ಮತ್ತು ಸುಳ್ಯದಲ್ಲಿ ರಝಿಯಾ ಬಾನು ನೇತೃತ್ವದಲ್ಲಿ ತಂಡ ಕಾರ್ಯ ನಿರ್ವಹಿಸಲಿದೆಯೆಂದು ಎಚ್.ಆರ್.ಎಸ್ ದಕ್ಷಿಣ ಕನ್ನಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Join Whatsapp
Exit mobile version