ಬಿಜೆಪಿ ಎಲ್ಲೆಡೆ ಸೋಲುವಾಗ ಹೇಗೆ 400 ಸ್ಥಾನ ಪಡೆಯಲಿದೆ?: ಮಲ್ಲಿಕಾರ್ಜುನ ಖರ್ಗೆ

Prasthutha|

ಕಲಬುರಗಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲೆಡೆ ಬಿಜೆಪಿ ಸೋಲುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಹೇಗೆ 400 ಸ್ಥಾನ ಗೆಲ್ಲುವ ಘೋಷಣೆ ಮಾಡುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪ್ರಶ್ನಿಸಿದ್ದಾರೆ.

- Advertisement -

ತಮ್ಮ ಹುಟ್ಟೂರಾದ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಎಲ್ಲೆಡೆ INDIA ಮೈತ್ರಿಕೂಟ ಬಹುಮತ ಪಡೆಯುವ ಸಾಧ್ಯತೆಯಿದೆ. ವಿಪಕ್ಷ ಮೈತ್ರಿಕೂಟದ ಪರವಾದ ಅಲೆ ಇದೆ. ಈ ಬಾರಿಯ ಚುನಾವಣೆ ಜನರು ಮತ್ತು ಪ್ರಧಾನಿ ಮೋದಿ ನಡುವಿನ ಚುನಾವಣೆಯಾಗಿದೆ ಏಕೆಂದರೆ ಜನರು ಇಂದು ಬೆಲೆ ಏರಿಕೆ, ನಿರುದ್ಯೋಗದಿಂದ ಹತಾಶರಾಗಿದ್ದಾರೆ. ಅಲ್ಲದೆ, ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂವಿಧಾನದ ಮೇಲೆ ದೊಡ್ಡ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದರು.

Join Whatsapp
Exit mobile version