Home ಟಾಪ್ ಸುದ್ದಿಗಳು ಅದಾನಿ ಗುಂಪಿನ ಕಂಪೆನಿಗಳಿಗೆ ಸ್ಥಳೀಯ ಬ್ಯಾಂಕುಗಳು ಎಷ್ಟು ಹಣ ಕೊಟ್ಟಿವೆ: ಮಾಹಿತಿ ಕೇಳಿದ RBI

ಅದಾನಿ ಗುಂಪಿನ ಕಂಪೆನಿಗಳಿಗೆ ಸ್ಥಳೀಯ ಬ್ಯಾಂಕುಗಳು ಎಷ್ಟು ಹಣ ಕೊಟ್ಟಿವೆ: ಮಾಹಿತಿ ಕೇಳಿದ RBI

ಮುಂಬೈ: ಅದಾನಿ ಗುಂಪಿನ ಕಂಪೆನಿಗಳಿಗೆ ಸ್ಥಳೀಯ ಬ್ಯಾಂಕುಗಳು ಎಷ್ಟು ಸುರಿದಿವೆ ಎನ್ನುವ ಪೂರ್ಣ ಮಾಹಿತಿಯನ್ನು ನೀಡುವಂತೆ ಭಾರತೀಯ ಕೇಂದ್ರೀಯ ಬ್ಯಾಂಕು ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ವರದಿ ಕೇಳಿದೆ.


ಹಾಗೆಯೇ ಸರಕಾರದ ಇತರ ಬ್ಯಾಂಕುಗಳ ಮೂಲದ ಮಾಹಿತಿಯನ್ನು ಸಹ ಆರ್’ಬಿಐ ಕೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್’ಬಿಐ)ವನ್ನು ಈ ಬಗ್ಗೆ ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ ಅದು ಪ್ರತಿಕ್ರಿಯಿಸಲಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಲು ತಮಗೆ ಅಧಿಕಾರವಿಲ್ಲ ಎಂದು ಅದರ ಪ್ರತಿನಿಧಿಗಳು ಹೇಳಿದರು.

Join Whatsapp
Exit mobile version