Home ಟಾಪ್ ಸುದ್ದಿಗಳು ಮಧ್ಯಪ್ರದೇಶ | ಕಳೆದ ಮಾರ್ಚ್ ನಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಶಾಸಕರ ಸಂಖ್ಯೆ ಎಷ್ಟು...

ಮಧ್ಯಪ್ರದೇಶ | ಕಳೆದ ಮಾರ್ಚ್ ನಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಶಾಸಕರ ಸಂಖ್ಯೆ ಎಷ್ಟು ಗೊತ್ತೇ?

► ಕಾಂಗ್ರೆಸ್ ಬಿಜೆಪಿಗೆ ಶಾಸಕರನ್ನು ಒದಗಿಸುವ ಫ್ಯಾಕ್ಟರಿ ಎನ್ನುವ ಪ್ರತಿಪಕ್ಷಗಳ ಆರೋಪಕ್ಕೆ ಮತ್ತಷ್ಟು ಪುಷ್ಟಿ!

ಮಧ್ಯಪ್ರದೇಶ: ಕಾಂಗ್ರೆಸ್ ಬಿಜೆಪಿಗೆ ಶಾಸಕರನ್ನು ಒದಗಿಸುವ ಫ್ಯಾಕ್ಟರಿ ಎಂದು ಸಿಪಿಐಎಂ, ಟಿಎಂಸಿ ಸಹಿತ ಹಲವು ಪ್ರತಿ ಪಕ್ಷಗಳು ಆರೋಪಿಸುತ್ತಲೇ ಬಂದಿವೆ. ಆದರೆ ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಮಧ್ಯಪ್ರದೇಶದಲ್ಲಿ ಕಳೆದ ಮಾರ್ಚ್ ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವವರ ಮಾಹಿತಿ ನೋಡಿದರೆ ನೀವು ಬೆಚ್ಚಿ ಬೀಳುತ್ತೀರಿ. ಕೇವಲ 8 ತಿಂಗಳ ಅವಧಿಯಲ್ಲಿ ಬರೋಬ್ಬರಿ 27 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿಕೊಂಡಿದ್ದಾರೆ.


ಕಳೆದ ಭಾನುವಾರ ಕಾಂಗ್ರೆಸ್ ಶಾಸಕ ಸಚಿನ್ ಬಿರ್ಲಾ ಆಡಳಿತರೂಢ ಬಿಜೆಪಿಗೆ ಸೇರ್ಪಡೆಯಾಗುವುದರೊಂದಿಗೆ, ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕರಲ್ಲಿ ಸಚಿನ್ 27ನೇ ಕಾಂಗ್ರೆಸ್ ಶಾಸಕರಾಗಿ ಗುರುತಿಸಿಕೊಂಡರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಸಚಿನ್ ಬಿರ್ಲಾ. ಖಾರ್ಗೋನ್ ಜಿಲ್ಲೆಯ ಬದ್ವಾಹ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಹಿತೇಂದ್ರ ಸಿಂಗ್ ಸೋಲಂಕಿ ಅವರ ವಿರುದ್ಧ 30,500 ಮತಗಳಿಂದ ಗೆದ್ದು ಬೀಗಿದ್ದರು.


ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ನೇತೃತ್ವದಲ್ಲಿ 22 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡು ಕಾಂಗ್ರೆಸ್ ಸರಕಾರದ ಪತನಕ್ಕೆ ಕಾರಣರಾಗಿದ್ದರು. ಮುಖ್ಯಮಂತ್ರಿಯಾಗಿದ್ದ ಕಮಲ್ ನಾಥ್ ಅಧಿಕಾರ ಕಳೆದು ಕೊಂಡಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಇತರ ನಾಲ್ಕು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

Join Whatsapp
Exit mobile version