ಹೌತಿ ಬಂಡುಕೋರರಿಂದ ಯೆಮೆನ್ ನಟಿ ಮತ್ತು ರೂಪದರ್ಶಿಯ ಅಪಹರಣ !

Prasthutha|

ಯೆಮೆನ್ ನಲ್ಲಿರುವ ಹೌತಿ ಬಂಡುಕೋರ ಗುಂಪು ಅಲ್ಲಿನ ನಟಿ ಹಾಗೂ ರೂಪದರ್ಶಿಯಾಗಿರುವ ಎಂತಿಸಾರ್ ಅಲ್ ಹಮ್ಮಾದಿ ಅವರನ್ನು ಅಪಹರಿಸಿದೆ ಎಂದು ಅಲ್ಲಿನ ಸಾಮಾಜಿಕ ಕಾರ್ಯಕರ್ತರ ಗುಂಪು ಹೇಳಿದೆ. ಯೆಮೆನ್ ಫೆಮಿನಿಸ್ಟ್ ವಾಯ್ಸ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಇದನ್ನು ಖಚಿತಪಡಿಸಲಾಗಿದ್ದು, ಹೌತಿ ಬಂಡುಕೋರರು ಮಹಿಳೆಯರನ್ನು ಬೆದರಿಸುವ ತಮ್ಮ ಕೃತ್ಯವನ್ನು ಮುಂದಿವರಿಸಿದೆ ಎಂದು ಅದು ಹೇಳಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು #Freedom_for_Entisar_alHammadi ಮತ್ತು #Where_Is_Entisar_alHammadi ಎಂಬ ಅರೇಬಿಕ್ ಹ್ಯಾಶ್ ಟ್ಯಾಗ್ ಬಳಸಿ ನಟಿಯ ಅಪಹರಣದ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಹಮ್ಮಾದಿ ಅವರು ಸ್ಥಳೀಯ ಹಲವು ಟೀವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

- Advertisement -

ಮಾಧ್ಯಮವೊಂದರ ವರದಿಯ ಪ್ರಕಾರ, ಸನಾ ವಿಮಾನ ನಿಲ್ದಾಣದ ಬಳಿ ಹೌತಿ ಬಂಡುಕೋರರು ಮಹಿಳೆಯರಿಗಾಗಿ “ರಹಸ್ಯ ಸೆರೆಮನೆ” ರಚಿಸಿದ್ದಾರೆ ಎಂದು ಕಾರ್ಯಕರತರು ಹೇಳಿದ್ದಾರೆ ಎಂದಿದೆ. ರಾಜಧಾನಿಯ ದಕ್ಷಿಣಕ್ಕಿರುವ ಹಜೀಜ್ ಪ್ರದೇಶದಲ್ಲಿ ಇದೇ ರೀತಿಯ ಮತ್ತೊಂದು ಜೈಲು ಇದೆ ಎಂದು ವರದಿ  ತಿಳಿಸಿದೆ. ಯೆಮೆನ್ ನ ಉತ್ತರ ಭಾಗದಲ್ಲಿ ಇಂತಹದೇ ಇನ್ನೂ ಎರಡು ಜೈಲುಗಳಿವೆ ಎಂದು ಆ ವರದಿ ತಿಳಿಸುತ್ತದೆ.

- Advertisement -