Home ಕರಾವಳಿ ತುಂಬೆ | ಭಾರೀ ಮಳೆಗೆ ಮನೆಯ ಕಂಪೌಂಡ್ ಕುಸಿತ: ಅಪಾರ ನಷ್ಟ

ತುಂಬೆ | ಭಾರೀ ಮಳೆಗೆ ಮನೆಯ ಕಂಪೌಂಡ್ ಕುಸಿತ: ಅಪಾರ ನಷ್ಟ

ಬಂಟ್ವಾಳ: ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ತುಂಬೆ ಗ್ರಾಮದ ರೊಟ್ಟಿಗುಡ್ಡೆ ಎಂಬಲ್ಲಿ ಮನೆಯ ಕಂಪೌಂಡ್ ಕುಸಿದಿದ್ದು, ಅಲ್ಲೇ ಸಮೀಪದ ಮನೆಯ ಗೋಡೆಗೆ ಹಾನಿಯಾಗಿದೆ.


ತುಂಬೆ ಬಳಿಯ ಶಶಿ ರೊಟ್ಟಿಗುಡ್ಡೆ ಎಂಬವರ ಮನೆಯ ಕಾಂಪೌಂಡ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ನೂತನವಾಗಿ ನಿರ್ಮಿಸಿದ್ದ ಮನೆಯ ಸುತ್ತಲೂ ಕಾಂಪೌಂಡ್ ರಚಿಸಿದ್ದು ಅದು ಕುಸಿದು ಬಿದ್ದಿದೆ.


ಕಾಂಪೌಂಡ್ ಕುಸಿದ ಪರಿಣಾಮ ಅಲ್ಲೇ ಸಮೀಪದ ರಾಮಚಂದ್ರ ಅವರ ಮನೆಯ ಗೋಡೆ ಸಂಪೂರ್ಣ ಹಾನಿಯಾಗಿದ್ದು, ಅಪಾರ ನಷ್ಟವಾಗಿದೆ.


ಸ್ಥಳಕ್ಕೆ ತುಂಬೆ ಗ್ರಾಮ ಲೆಕ್ಕಾಧಿಕಾರಿ, ತುಂಬೆ ಪಂಚಾಯತ್ ಅಧ್ಯಕ್ಷ ಪ್ರವೀಣ್ ತುಂಬೆ, ಪಂಚಾಯತ್ ಸದಸ್ಯರಾದ ಝವುರ್ ತುಂಬೆ, ಅಝೀಝ್ ತುಂಬೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version