Home ಟಾಪ್ ಸುದ್ದಿಗಳು ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಸಿಗುವ ಭರವಸೆ ಇದೆ: ಎಂ. ಲಕ್ಷ್ಮಣ್

ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಸಿಗುವ ಭರವಸೆ ಇದೆ: ಎಂ. ಲಕ್ಷ್ಮಣ್

ಮಡಿಕೇರಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ತಮಗೆ ಸಿಗುವ ಬಗ್ಗೆ ವಿಶ್ವಾಸ ಇದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಎಂ ಲಕ್ಷ್ಮಣ್ ವ್ಯಕ್ತಪಡಿಸಿದರು.


ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕಳೆದೆರಡು ವರ್ಷಗಳಿಂದ ಕೊಡುಗು ಜಿಲ್ಲೆಯ ಉಸ್ತುವಾರಿಯಾಗಿ ನಿಷ್ಠೆಯಿಂದ ದುಡಿಯುತ್ತಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವಲ್ಲಿ ತನ್ನ ಅಳಿಲು ಸೇವೆ ಇದೆ ಎಂದರು.


ಟಿಕೆಟ್ ಸಿಕ್ಕಿದ್ದೇಯಾದರೆ ತಾನು ಇಟ್ಟುಕೊಂಡಿರುವ ವಿಶನ್ ಮತ್ತು ರಾಜ್ಯ ಸರ್ಕಾರ ನೀಡಿರುವ ಕಾರ್ಯಕ್ರಮಗಳ ಆಧಾರದಲ್ಲಿ ವೋಟು ಕೇಳುವುದಾಗಿ ಲಕ್ಷ್ಮಣ್ ಹೇಳಿದರು.

Join Whatsapp
Exit mobile version