Home ಟಾಪ್ ಸುದ್ದಿಗಳು ವಿವಾಹಕ್ಕೆ ಮನೆಯವರ ವಿರೋಧ: ರೈಲು ಹಳಿಗೆ ತಲೆ ಇಟ್ಟು ಪ್ರೇಮಿಗಳು ಆತ್ಮಹತ್ಯೆ

ವಿವಾಹಕ್ಕೆ ಮನೆಯವರ ವಿರೋಧ: ರೈಲು ಹಳಿಗೆ ತಲೆ ಇಟ್ಟು ಪ್ರೇಮಿಗಳು ಆತ್ಮಹತ್ಯೆ

ಬೆಂಗಳೂರು: ಪ್ರೇಮ ವಿವಾಹಕ್ಕೆ ಕುಟುಂಬದವರು ಒಪ್ಪಲಿಲ್ಲ ಎಂದು ಯುವ ಪ್ರೇಮಿಗಳು ರೈಲಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಯಪ್ಪನಹಳ್ಳಿ ಬಳಿ  ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಮಂದೂರು ಬಳಿಯ ಮಾರನಾಯಕನಹಳ್ಳಿಯ ಮಣಿ ಮತ್ತು ತಮಿಳುನಾಡಿನ ಕೊತ್ತಗೊಂಡಪಲ್ಲಿಯ ಅನುಷಾ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.

ಸಮಂದೂರು ದಿನ್ನೆ ರೈಲ್ವೆ ಹಳಿ ಮೇಲೆ ಹೊಸೂರು ಕಡೆಗೆ ಹೊರಟಿದ್ದ ರೈಲಿಗೆ ಇವರಿಬ್ಬರೂ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾರನಾಯಕನಹಳ್ಳಿಯ ಯುವಕನ ಮನೆ  ಬಳಿ ಕಳೆದ ಫೆ.26ರಂದು ಇಬ್ಬರು ಕಾಣಿಸಿಕೊಂಡಿದ್ದರು. ಈ ಕುರಿತು ಯುವತಿಯ ಮನೆಗೆ ಸಂಬಂಧಿಕರು ವಿಷಯ ಮುಟ್ಟಿಸಿದ್ದರು.

ಅನಂತರ ಸಂಜೆಯ ವೇಳೆಗೆ ಇಬ್ಬರ ಮೃತ ದೇಹಗಳು ರೈಲ್ವೆ ಹಳಿಯ ಮೇಲೆ ಕಾಣಿಸಿಕೊಂಡಿವೆ. ರಾತ್ರಿ ಬೈಯಪ್ಪನಹಳ್ಳಿ ಪೊಲೀಸರು ಮಾಹಿತಿ ತಿಳಿದು ಶವಗಳನ್ನು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version