Home ಟಾಪ್ ಸುದ್ದಿಗಳು ದಲಿತನಾಗಿರುವುದಕ್ಕೆ ಗೃಹ ಸಚಿವರು ನನ್ನನ್ನು ಸಂಪರ್ಕಿಸಿಲ್ಲ : ಎಂ.ಪಿ. ಕುಮಾರಸ್ವಾಮಿ

ದಲಿತನಾಗಿರುವುದಕ್ಕೆ ಗೃಹ ಸಚಿವರು ನನ್ನನ್ನು ಸಂಪರ್ಕಿಸಿಲ್ಲ : ಎಂ.ಪಿ. ಕುಮಾರಸ್ವಾಮಿ

ಬೆಂಗಳೂರು: ನಾನೊಬ್ಬ ದಲಿತ ಶಾಸಕ ಎಂಬ ಕಾರಣಕ್ಕೆ ನನ್ನ ಮೇಲೆ ಹಲ್ಲೆಯಾದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಸೌಜನ್ಯಕ್ಕೂ ಸಂಪರ್ಕಿಸಿ ಸಮಾಧಾನ ಹೇಳಿಲ್ಲ ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದಕ್ಕೆ ನನ್ನ ಮೇಲೆ ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.  ಇದೇನು ಸಣ್ಣ ಘಟನೆಯಲ್ಲ. ನಾನು ಬಿಜೆಪಿ ಶಾಸಕನೇ ಆಗಿದ್ದರೂ ದಲಿತ ಎಂಬ ಕಾರಣಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆಮಾಡಿ ವಿಚಾರಿಸಿದ್ದಾರೆ. ಆದರೆ, ಗೃಹ ಸಚಿವರು ಈವರೆಗೂ ನನ್ನನ್ನು ಸಂಪರ್ಕಿಸಿಲ್ಲ. ಶಾಸಕ ಎಂಬ ನೆಲೆಯಲ್ಲಲ್ಲ,  ಸಹೋದ್ಯೋಗಿ ಎಂಬ ನೆಲೆಯಲ್ಲಾದರೂ ನನ್ನನ್ನು ಮಾತನಾಡಿಸದೇ ಇರುವುದು ನೋವು ತಂದಿದೆ ಎಂದು ಹೇಳಿದರು.

Join Whatsapp
Exit mobile version