ಕರ್ನಾಟಕ ಬಂದ್ ಹಿಂಪಡೆಯಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ
Prasthutha: December 30, 2021

ಬೆಂಗಳೂರು: ಕರ್ನಾಟಕ ಬಂದ್ ಕರೆ ನೀಡಿದ ಕನ್ನಡಪರ ಸಂಘಟನೆ ಗಳಿಗೆ ಬಂದ್ ಕರೆಯನ್ನು ಹಿಂಪಡೆಯಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಸಚಿವರು, ಕನ್ನಡ ವಿರೋಧಿ ಪುಂಡರನ್ನು ಈಗಾಗಲೇ ಬಂಧಿಸಿದ್ದು, ಕಠಿಣಕ್ರಮ ಜರಗಿಸಲಾಗುತ್ತಿದೆ.
ಸಾಂಕ್ರಮಿಕ ಕೋವಿಡ್ ಕಾರಣದಿಂದ ಈಗಾಗಲೇ ಆರ್ಥಿಕವಾಗಿ ಜರ್ಜರಿತವಾಗಿ ಸಂಕಷ್ಟಕ್ಕೆ ಒಳಗಾಗಿರುವ ಮಹಾ ಜನತೆಗೆ, ಇನ್ನಷ್ಟು ಹೊರೆಯನ್ನು ಹೇರಲು ನಾವು ಕಾರಣವಾಗಬಾರದು.
ಎಂ ಇ ಎಸ್ ಅನ್ನು ಈಗಾಗಲೇ ಬೆಳಗಾವಿ ನಗರದ ಜನತೆ ನಿಷೇಧಿಸಿದ್ದಾರೆ ಹಾಗೂ ಸರಕಾರವು, ರಾಜ್ಯದ ಜಲ, ನೆಲ ಹಾಗೂ ನುಡಿಯ ರಕ್ಷಣೆಗೆ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
