Home ಟಾಪ್ ಸುದ್ದಿಗಳು ರಾಜ್ಯಾದ್ಯಂತ ನಾಳೆಯಿಂದ ಶಾಲಾ ಮಕ್ಕಳಿಗೆ ದಸರಾ ರಜೆ ಆರಂಭ

ರಾಜ್ಯಾದ್ಯಂತ ನಾಳೆಯಿಂದ ಶಾಲಾ ಮಕ್ಕಳಿಗೆ ದಸರಾ ರಜೆ ಆರಂಭ

ಬೆಂಗಳೂರು: ನಾಳೆಯಿಂದ ನವರಾತ್ರಿ ಶುರುವಾಗುತ್ತಿದೆ. ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ.

ಸದ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20ರ ತನಕ ದಸರಾ ರಜೆ ಘೋಷಿಸಿದ್ದು, ನಾಳೆಯಿಂದಲೇ ಮಕ್ಕಳಿಗೆ ದಸರಾ ರಜೆ ಆರಂಭವಾಗಲಿದೆ.

ಒಟ್ಟು 17 ದಿನ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ಇರಲಿದೆ.

2024-25ನೇ ಶೈಕ್ಷಣಿಕ ಸಾಲಿನ ದಸರಾ ರಜೆ ಅಕ್ಟೋಬರ್ 3 ರಿಂದ 20 ರವರೆಗೆ ಇರಲಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇದ್ದು, ಕಾರ್ಯಕ್ರಮದ ನಂತರ ರಜೆಗಳು ಆರಂಭವಾಗಲಿದೆ. ಇನ್ನು ದಸರಾ ರಜೆ ಬಳಿಕ ಅಕ್ಟೋಬ‌ರ್ 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ತನಕ ಶಾಲೆ ನಡೆಯಲಿದೆ.

Join Whatsapp
Exit mobile version