Home ಟಾಪ್ ಸುದ್ದಿಗಳು ಸರಕಾರಿ ಆಸ್ಪತ್ರೆಯಲ್ಲಿ ರಕ್ತ ಪಡೆದ ಮಕ್ಕಳಲ್ಲಿ ಎಚ್‌ಐವಿ:  ಬಿಜೆಪಿಯ ಅಕ್ಷಮ್ಯ ಅಪರಾಧ ಎಂದ ಮಲ್ಲಿಕಾರ್ಜುನ ಖರ್ಗೆ

ಸರಕಾರಿ ಆಸ್ಪತ್ರೆಯಲ್ಲಿ ರಕ್ತ ಪಡೆದ ಮಕ್ಕಳಲ್ಲಿ ಎಚ್‌ಐವಿ:  ಬಿಜೆಪಿಯ ಅಕ್ಷಮ್ಯ ಅಪರಾಧ ಎಂದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಉತ್ತರ ಪ್ರದೇಶದ ಸರಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಗೆ ಒಳಗಾಗಿದ್ದ ಮಕ್ಕಳಿಗೆ ಹೆಪಟೈಟಿಸ್ ಬಿ, ಸಿ, ಎಚ್‌ಐವಿ ಸೋಂಕು ತಗುಲಿರುವುದು ದೃಢಪಟ್ಟಿದೆ.  ಈ ಸಂಬಂಧವಾಗಿ ಆದಿತ್ಯನಾಥ್ ನೇತೃತ್ವದ  ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ  ನಡೆಸಿದ್ದಾರೆ.

ಯುಪಿಯ ಕಾನ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಥಲಸ್ಸೆಮಿಯಾದಿಂದ ಬಳಲುತ್ತಿರುವ 14 ಮಕ್ಕಳಿಗೆ ಸೋಂಕಿತ ರಕ್ತವನ್ನು ನೀಡಲಾಗಿದೆ. ಇದರಿಂದಾಗಿ ಈ ಮಕ್ಕಳು ಎಚ್‌ಐವಿ ಏಡ್ಸ್ ಮತ್ತು ಹೆಪಟೈಟಿಸ್ ಬಿ, ಸಿ ಯಂತಹ ಗಂಭೀರ ಕಾಯಿಲೆ ತಗುಲಿದೆ. ಈ ಗಂಭೀರ ನಿರ್ಲಕ್ಷ್ಯವು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಖರ್ಗೆ ಎಕ್ಸ್‌ನಲ್ಲಿ ಬರೆದಿದ್ದಾರೆ. ಬಿಜೆಪಿಯ ಅಕ್ಷಮ್ಯ ಅಪರಾಧಕ್ಕಾಗಿ ಮಕ್ಕಳು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರವು ನಮ್ಮ ಆರೋಗ್ಯ ವ್ಯವಸ್ಥೆಯನ್ನು ದುಪ್ಪಟ್ಟು ಅನಾರೋಗ್ಯಕ್ಕೆ ಒಳಪಡಿಸಿದೆ ಎಂದಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದ ಸರ್ಕಾರಿ ಲಾಲಾ ಲಜಪತ್ ರಾಯ್  ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಗೆ ಒಳಗಾಗಿದ್ದ 14 ಮಕ್ಕಳಿಗೆ ಹೆಪಟೈಟಿಸ್ ಮತ್ತು ಎಚ್‌ಐವಿ ಪಾಸಿಟಿವ್‌ ಕಂಡು ಬಂದ ಆಘಾತಕಾರಿ ಘಟನೆ ಸೋಮವಾರ ನಡೆದಿತ್ತು.

Join Whatsapp
Exit mobile version