ಹಿಟ್ ಆ್ಯಂಡ್ ರನ್ ಕೇಸ್: ವ್ಯಕ್ತಿಯನ್ನು ಬಾನೆಟ್ ಮೇಲೆ ಎಳೆದೊಯ್ದ ಟಿಟಿ ಚಾಲಕ

Prasthutha|

ನವದೆಹಲಿ: ಲಜ್ ಪತ್ ನಗರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು ಅದರ ಬಾನೆಟ್ ಮೇಲೆ ಸ್ವಲ್ಪ ದೂರದವರೆಗೆ ಎಳೆದಕೊಂಡು ಹೋಗಿರುವ ಘಟನೆ ನಡೆದಿದೆ.

- Advertisement -

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ಹೀಗೆ ಮಿನಿಬಾಸ್ ಬಾನೆಟ್ ಮೇಲೆ ಎಳೆದೊಯ್ದ ವ್ಯಕ್ತಿ ಲಜಪತ್ ನಗರದಿಂದ ದೆಹಲಿ-ನೋಯ್ಡಾ ಫ್ಲೈ ಓವರ್ ಕಡೆಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಘಟನೆಯ ದೃಶ್ಯಗಳು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಕ್ತಿ ಒಂದು ಕೈಯಿಂದ ಟ್ರಾವೆಲರ್ನ ಬಾನೆಟ್ ಹಿಡಿದು ನೇತಾಡುತ್ತಿರುವುದು ವಿಡಿಯೋದಲ್ಲಿದೆ. ಪ್ರತ್ಯಕ್ಷದರ್ಶಿಯೊಬ್ಬರಿಂದ ಕರೆ ಬಂದ ನಂತರ ಪೊಲೀಸರು ಘಟನೆ ಸಂಬಂಧ ದೂರು ದಾಖಲಿಸಿದ್ದಾರೆ.



Join Whatsapp