ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಗಿಂತ ಅವರ ಮಗ ಐದು ಪಟ್ಟು ಶ್ರೀಮಂತ !

Prasthutha|

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ಗಿಂತ ಅವರ ಪುತ್ರ ನಿಶಾಂತ್‌ ಐದು ಪಟ್ಟು ಶ್ರೀಮಂತ ಎಂದು ವರದಿಯಾಗಿದೆ.

- Advertisement -

ಡಿ.31ರಂದು ಶಾಸಕರು, ಸಚಿವರು ಆದಾಯ ಘೋಷಣೆ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು, ಸಚಿವರು ವೆಬ್‌ ಸೈಟ್‌ ನಲ್ಲಿ ಆದಾಯ ಘೋಷಣೆ ಮಾಡಿಕೊಂಡಿದ್ದಾರೆ.   ಆ ಪ್ರಕಾರ ನಿತೀಶ್‌ ಅವರ ಚರಾಸ್ತಿ, ಸ್ಥಿರಾಸ್ತಿ ಮೌಲ್ಯ 75.36 ಲಕ್ಷ ರೂ. ನಿತೀಶ್‌ ಬಳಿ 29,385 ರೂ. ನಗದು ಇದೆ.

ಬ್ಯಾಂಕ್‌ ಖಾತೆ ಯಲ್ಲಿ 42,763 ಹಣವಿದೆ. 16.51 ಲಕ್ಷ ರೂ. ಮೌಲ್ಯದ ಚರಾಸ್ತಿಗಳಿವೆ. ಸ್ಥಿರಾಸ್ತಿ ಮೌಲ್ಯ 58.85 ಲಕ್ಷ ರೂ. ಅವರ ಪುತ್ರ ನಿಶಾಂತ್‌ ಚರಾಸ್ತಿ ಮೌಲ್ಯ 1.63 ಕೋಟಿ ರೂ., ಸ್ಥಿರಾಸ್ತಿ ಮೌಲ್ಯ 1.98 ಕೋಟಿ ರೂ. ಮುಖ್ಯ ಮಂತ್ರಿ ನಿತೀಶ್‌ ದಿಲ್ಲಿಯ ದ್ವಾರಕಾದಲ್ಲಿ ಒಂದು ಫ್ಲಾಟ್‌ ಹೊಂದಿದ್ದಾರೆ. ಅವರ ಪುತ್ರ ನಿಶಾಂತ್‌ ಬಿಹಾರದ ನಳಂದಾ ಜಿಲ್ಲೆಯಲ್ಲಿ ಕೃಷಿಭೂಮಿ ಮತ್ತು ಮನೆಗಳನ್ನು ಹೊಂದಿದ್ದಾರೆ. ಪಟ್ನಾದ ಕಂಕಾರ್‌ಬಾಘನಲ್ಲೂ ಆಸ್ತಿ ಹೊಂದಿದ್ದಾರೆ.

- Advertisement -

ಇನ್ನೂ ವಿಶೇಷವೆಂದರೆ ನಿತೀಶ್‌ ಬಳಿ 13 ಹಸುಗಳು, 9 ಕರುಗಳನ್ನು ಹೊಂದಿರುವುದಾಗಿ ವೆಬ್‌ಸೈಟ್‌ ನಲ್ಲಿ ಉಲ್ಲೇಖಿಸಲಾಗಿದೆ.

Join Whatsapp