Home ಟಾಪ್ ಸುದ್ದಿಗಳು ಹಿಮಾಚಲ ಪ್ರದೇಶ । ಸಂಘಪರಿವಾರ ಕಾರ್ಯಕರ್ತರಿಂದ ಮತ್ತೊಂದು ದರ್ಗಾ ಧ್ವಂಸ

ಹಿಮಾಚಲ ಪ್ರದೇಶ । ಸಂಘಪರಿವಾರ ಕಾರ್ಯಕರ್ತರಿಂದ ಮತ್ತೊಂದು ದರ್ಗಾ ಧ್ವಂಸ

ಶಿಮ್ಲಾ: ಸಂಘಪರಿವಾರದ ಕಾರ್ಯಕರ್ತರು ಹಿಮಾಚಲ ಪ್ರದೇಶದಲ್ಲಿ ಮತ್ತೊಂದು ದರ್ಗಾವನ್ನು ಧ್ವಂಸಗೊಳಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

15 ದಿನಗಳ ಅವಧಿಯಲ್ಲಿ ಹಿಮಾಚಲ ಪ್ರದೇಶದಲ್ಲಿ ಸಂಘಪರಿವಾರ ನಡೆಸುತ್ತಿರುವ ಎರಡನೇ ದರ್ಗಾ ಧ್ವಂಸ ಪ್ರಕರಣ ಇದಾಗಿದೆ.
ದರ್ಗಾವನ್ನು ಹೊಡೆದುರುಳಿಸುವ ವೀಡಿಯೋವನ್ನು ಕಮಲ್ ಗೌತಮ್ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.

ಈ ಹಿಂದೆಯೋ ಕೂಡ ಸಂಘಪರಿವಾರದ ಕಾರ್ಯಕರ್ತ ಹರೀಶ್ ರಾಮ್ಕಾಲಿ ಎಂಬಾತ ಇತರರೊಂದಿಗೆ ಸೇರಿಕೊಂಡು ದರ್ಗಾವನ್ನು ಧ್ವಂಸಗೊಳಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು.

Join Whatsapp
Exit mobile version