Home ಟಾಪ್ ಸುದ್ದಿಗಳು ‘ಹಿಂದೂಗಳಿಗೆ ಮಾತ್ರ’ ಬ್ಯಾನರ್: ತೆರವುಗೊಳಿಸುವಾಗ ವಾಗ್ವಾದ

‘ಹಿಂದೂಗಳಿಗೆ ಮಾತ್ರ’ ಬ್ಯಾನರ್: ತೆರವುಗೊಳಿಸುವಾಗ ವಾಗ್ವಾದ

ವಿಜಯಪುರ: ನಗರದ ಶ್ರೀಸಿದ್ದೇಶ್ವರ ಸಂಕ್ರಾಂತಿ ಜಾತ್ರಾ ಮಹೋತ್ಸವದಲ್ಲಿ ‘ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು’ ಎಂಬ ಬ್ಯಾನರ್ ಅಳವಡಿಸಲಾಗಿದ್ದು, ಆ ಬ್ಯಾನರ್ ತೆರವುಗೊಳಿಸಲು ಮುಂದಾದ ದೇವಸ್ಥಾನದ ಸಿಬ್ಬಂದಿ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಾಗ್ವಾದಕ್ಕಿಳಿದ ಘಟನೆ ನಡೆದಿದೆ.

ಸಿದ್ದೇಶ್ವರ ಜಾತ್ರೆಯಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಬೇಕು, ಈ ಸಂಬಂಧ ಬ್ಯಾನರ್ ಕೂಡಾ ಹಾಕಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿಗೆ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಶಾಸಕರೂ ಆದ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ -ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ದೇವಸ್ಥಾನ ಸಮಿತಿ ತಟಸ್ಥ ನಿಲುವು ತಾಳಿತ್ತು.

ಬಳಿಕ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಇದರ ಹೊರತಾಗಿ ಅನ್ಯಕೋಮಿನ ಲವ್, ಜಿಹಾದ್ ಹೆಸರಿನಲ್ಲಿ ತುಂಡು ತುಂಡಾಗಿ ಕತ್ತರಿಸುವ ಹಾಗೂ ದೇಶದ ಅಖಂಡತೆಗೆ ಧಕ್ಕೆ ತರುವ ಕೆಲಸ ಮಾಡುವ ಸಮುದಾಯದ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಬರೆದು ಬ್ಯಾನರ್ ಕಟ್ಟಲಾಗಿದೆ. ಇದನ್ನು ದೇವಸ್ಥಾನ ಸಮಿತಿ ತೆರವುಗೊಳಿಸಲು ಮುಂದಾದಾಗ ವಾಗ್ದಾದ ನಡೆದಿದೆ.

ಜ.12 ರಿಂದ 16 ರ ವರೆಗೆ ವರೆಗೆ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯುತ್ತಿರುವ ಹಿನ್ನೆಲೆ ಶ್ರೀಸಿದ್ಧೇಶ್ವರ ಸಂಸ್ಥೆಯ ಸಿಬ್ಬಂದಿ ಸಿದ್ದೇಶ್ವರ ದೇವಸ್ಥಾನದ ಎದುರು ಅಳವಡಿಸಿದ್ದ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಬೇಕು ಎಂಬ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದರು.

Join Whatsapp
Exit mobile version