Home ಟಾಪ್ ಸುದ್ದಿಗಳು “ಬಾಂಗ್ಲಾದೇಶದ ಹಿಂದೂಗಳಿಗೆ ಭಾರತದ ಪೌರತ್ವ ತಿದ್ದುಪಡಿ ಕಾಯ್ದೆಯ ಅಗತ್ಯತೆಯಿಲ್ಲ” – ಬಾಂಗ್ಲಾದ ಹಿಂದೂ ಮುಖಂಡ

“ಬಾಂಗ್ಲಾದೇಶದ ಹಿಂದೂಗಳಿಗೆ ಭಾರತದ ಪೌರತ್ವ ತಿದ್ದುಪಡಿ ಕಾಯ್ದೆಯ ಅಗತ್ಯತೆಯಿಲ್ಲ” – ಬಾಂಗ್ಲಾದ ಹಿಂದೂ ಮುಖಂಡ

ಭಾರತದಲ್ಲಿ ಹಲವು ಆಕ್ರೋಶಗಳಿಗೆ, ಆಕ್ಷೇಪಗಳಿಗೆ ಕಾರಣವಾದ ಪೌರತ್ವ ತಿದ್ದುಪಡಿ ಕಾಯ್ದೆ ( ಸಿಎಎ) ಇದೀಗ ಬಾಂಗ್ಲಾದೇಶದಲ್ಲಿ ಸುದ್ದಿಯಾಗುತ್ತಿದ್ದು, ನಮಗೆ ಭಾರತದ ಪೌರತ್ವ ತಿದ್ದುಪಡಿ ಕಾಯ್ದೆಯ ಅಗತ್ಯತೆಯಿಲ್ಲ ಎಂದು ಅಲ್ಲಿನ ಹಿಂದೂ ಸಮುದಾಯದ ಮುಖಂಡರೊಬ್ಬರು ಹೇಳಿದ್ದಾರೆ.

ನೆರೆ ರಾಷ್ಟ್ರಗಳ ಹಿಂದೂಗಳಿಗೆ ಭಾರತದಲ್ಲಿ ವಾಸಿಸಲು ಅವಕಾಶ ಕಲ್ಪಿಸುವ ಸಿಎಎ ಕುರಿತು ಮಾತನಾಡಿದ ಬಾಂಗ್ಲಾದೇಶದ ಹಿಂದೂ ಮುಖಂಡ, ಮಹಾನಗರ ಸರ್ವಜನ ಪೂಜಾ ಸಮಿತಿಯ ಅಧ್ಯಕ್ಷ ಮೋನಿಂದರ್ ಕುಮಾರನಾಥ್ ‘ ಬಾಂಗ್ಲಾದ ಹಿಂದೂಗಳು ಸಿಎಎ ಕುರಿತು ಹೆಚ್ಚಿನ ಆಸಕ್ತಿ ಹೊಂದಿಲ್ಲ .ಇಲ್ಲಿನ ಹಿಂದೂಗಳಿಗೆ ಅವರದ್ದೇ ಆದ ಸಮಸ್ಯೆಗಳಿವೆ. ಸಿಎಎ ಯಿಂದ ಏನೂ ನಿರೀಕ್ಷಿಸಬೇಕಾಗಿಲ್ಲ . ಸಿ ಎ ಎ ಬಾಂಗ್ಲಾದ ಹಿಂದೂಗಳಿಗೆ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

ಪ್ರಧಾನಿ ಶೇಖ್ ಹಸಿನಾ ನೇತೃತ್ವದ ಸರಕಾರದಲ್ಲಿ ನಾವು ಸುರಕ್ಷಿತರಾಗಿದ್ದೇವೆ. ಪ್ರಧಾನಿಯವರ ಫಲಕಾರಿಯಾದ ಕ್ರಮಗಳಿಂದ ಅಲ್ಪಸಂಖ್ಯಾತರಾದ ಹಿಂದೂಗಳು ಸುಧಾರಿತಗೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

Join Whatsapp
Exit mobile version