Home ಟಾಪ್ ಸುದ್ದಿಗಳು ಈದ್ ಸಂಭ್ರಮದ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಬಿಜೆಪಿ ಮುಖಂಡರಿಂದ ಹಿಂದೂ ಯುವಕನ ಮೇಲೆ ಹಲ್ಲೆ

ಈದ್ ಸಂಭ್ರಮದ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಬಿಜೆಪಿ ಮುಖಂಡರಿಂದ ಹಿಂದೂ ಯುವಕನ ಮೇಲೆ ಹಲ್ಲೆ

ಅಗರ್ತಲಾ: ಈದ್ ಹಿನ್ನೆಲೆಯಲ್ಲಿ ಸಾಮರಸ್ಯದ ವಿಡಿಯೋದಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಹಿಂದೂ ಯುವಕನ ಮೇಲೆ ಬಿಜೆಪಿ ಮುಖಂಡರು ಹಲ್ಲೆ ನಡೆಸಿದ ಘಟನೆ ತ್ರಿಪುರದ ಖುಪಿಲಾಂಗ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.


ಉದಯಪುರ ಮೂಲದ 23 ವರ್ಷದ ಬಾಪನ್ ನಂದಿ ಮೇಲೆ ಬಿಜೆಪಿ ಮುಖಂಡರು ಹಲ್ಲೆ ನಡೆಸಿದ್ದಾರೆ.


ಬಾಪನ್ ನಂದಿ ತ್ರಿಪುರದ ಖುಪಿಲಾಂಗ್ ಪ್ರದೇಶದ ಪ್ರಸಿದ್ಧ ವಿಷಯ ಸೃಷ್ಟಿಕರ್ತ ಮತ್ತು ವ್ಲಾಗಿಂಗ್ ತಜ್ಞ. ಅವರ ಅನೇಕ ವ್ಲಾಗ್ ಗಳು ರಾಜ್ಯದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ.
ಶನಿವಾರ ಸ್ಥಳೀಯ ಬಿಜೆಪಿ ಈತನನ್ನು ಕರೆಸಿಕೊಂಡು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಘಟನೆಯ ವಿಡಿಯೊವನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

Join Whatsapp
Exit mobile version