Home ಟಾಪ್ ಸುದ್ದಿಗಳು ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನದ ಧ್ವಂಸ | ಅದೇ ಜಾಗದಲ್ಲಿ ಸರಕಾರದ ದುಡ್ಡಿನಲ್ಲೇ ದೇವಸ್ಥಾನ ನಿರ್ಮಾಣಕ್ಕೆ ನಿರ್ಧಾರ

ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನದ ಧ್ವಂಸ | ಅದೇ ಜಾಗದಲ್ಲಿ ಸರಕಾರದ ದುಡ್ಡಿನಲ್ಲೇ ದೇವಸ್ಥಾನ ನಿರ್ಮಾಣಕ್ಕೆ ನಿರ್ಧಾರ

ಪೇಶಾವರ : ಪಾಕಿಸ್ತಾನದ ಖೈಬರ್ ಪಖ್ತೂಂಖ್ವ ಪ್ರಾಂತ್ಯದ ಗ್ರಾಮವೊಂದರಲ್ಲಿ ಹಿಂದೂ ದೇವಾಲಯವೊಂದನ್ನು ಉದ್ರಿಕ್ತ ಗುಂಪೊಂದು ಧ್ವಂಸಗೊಳಿಸಿದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ, ಆ ದೇವಸ್ಥಾನದ ಜಾಗದಲ್ಲೇ ಸರಕಾರದ ದುಡ್ಡಿನಲ್ಲೇ ದೇವಾಲಯವನ್ನು ಮರು ನಿರ್ಮಿಸಲಾಗುವುದು ಎಂದು ಅಲ್ಲಿನ ಸರಕಾರ ಘೋಷಿಸಿದೆ.

ತೆರ್ರಿ ಗ್ರಾಮದಲ್ಲಿನ ದೇವಸ್ಥಾನಕ್ಕೆ ಹೊಂದಿಕೊಂಡಿದ್ದ ಕಟ್ಟಡದಲ್ಲಿ ನಡೆಯುತ್ತಿದ್ದ ನವೀಕರಣವನ್ನು ವಿರೋಧಿಸಿ 1,500ಕ್ಕೂ ಅಧಿಕ ಮಂದಿಯಿದ್ದ ಗುಂಪೊಂದು ದೇವಾಲಯವನ್ನು ಧ್ವಂಸಗೊಳಿಸಿತ್ತು.

ದೇವಾಲಯಕ್ಕೆ ಆದ ಹಾನಿಗೆ ನಾವು ವಿಷಾಧಿಸುತ್ತೇವೆ ಎಂದು ಪ್ರಾಂತ್ಯದ ಮಾಹಿತಿ ಸಚಿವ ಕಮ್ರನ್ ಬಂಗಷ್ ಹೇಳಿದ್ದಾರೆ. ಈ ದೇವಸ್ಥಾನ ಹಾಗೂ ಅದರ ಪಕ್ಕದ ಮನೆಯ ಮರು ನಿರ್ಮಾಣಕ್ಕೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ನಿರ್ಮಾಣ ಕಾರ್ಯ ಹಿಂದೂ ಸಮುದಾಯದ ಬೆಂಬಲದೊಂದಿಗೆ ಆರಂಭಗೊಳ್ಳಲಿದೆ. ದೇವಸ್ಥಾನಕ್ಕೆ ರಕ್ಷಣೆಯನ್ನೂ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version