ನವದೆಹಲಿ: ತನ್ನನ್ನು ಹಿಂದೂ ಸಮಾಜ ಸ್ವೀಕರಿಸಿಲ್ಲ ಎಂದು ಕಳೆದ ವರ್ಷ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಮುಖ್ಯಸ್ಥ ವಾಸೀಮ್ ರಿಜ್ವಿ ಅಲಿಯಾಸ್ ಜಿತೇಂದ್ರ ತ್ಯಾಗಿ ಹೇಳಿದ್ದಾರೆ.
ಈ ಕುರಿತು ವೀಡಿಯೋವೊಂದನ್ನು ಬಿಡುಗಡೆ ಮಾಡಿದ ಅವರು, ತನ್ನನ್ನು ಹಿಂದೂ ಸಮಾಜ ಪ್ರೀತಿಯಿಂದ ಸ್ವೀಕರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ತನ್ನ ನಿರ್ಧಾರವು ಪ್ರಜ್ಞಾಪೂರ್ವಕ ನಿರ್ಧಾರವಾಗಿದೆ. ತಮ್ಮ “ಘರ್ ವಾಪಸಿ” ಬಗ್ಗೆ ವಿಷಾದಿಸುವುದಿಲ್ಲ. ಇಸ್ಲಾಂನಿಂದ ಮತಾಂತರಗೊಂಡ ನಂತರ ಹಿಂದೂ ಸಮಾಜದಲ್ಲಿ ತಮ್ಮನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂಬುದರ ಬಗ್ಗೆ ನಿರಾಶೆಗೊಂಡಿರುವುದಾಗಿ ಅವರು ಹೇಳಿದರು.
ಹಲವಾರು ವರ್ಷಗಳ ನಂತರ ಮನೆಗೆ ಮರಳುವ ದೂರದ ಸಂಬಂಧಿಯಂತೆ ನನ್ನನ್ನು ನಡೆಸಿಕೊಳ್ಳಲಾಯಿತು. ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ. ತನ್ನ ಶತ್ರುಗಳಿಂದ ಕೊಲ್ಲಲ್ಪಡುವ ಬದಲು ತನ್ನ ಜೀವನವನ್ನು ತಾನೇ ಕೊನೆಗಾಣಿಸಲು ಪ್ರಯತ್ನಿಸಬಹುದು ಎಂದೂ ವೀಡಿಯೋದಲ್ಲಿ ತಿಳಿಸಿದ್ದಾರೆ.