Home ಟಾಪ್ ಸುದ್ದಿಗಳು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಸಂಪ್ರದಾಯದಂತೆ ಮದುವೆಯಾದ ಜೋಡಿ

ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಸಂಪ್ರದಾಯದಂತೆ ಮದುವೆಯಾದ ಜೋಡಿ

ತಮಿಳುನಾಡು: ಜೋಡಿಯೊಂದು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೈಲಾಡುತುರೈ ಗ್ರಾಮ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪುರುಷೋತ್ತಮನ್ ಅವರ ಪೋಷಕರು ಭುವನೇಶ್ವರಿ ಅವರೊಂದಿಗೆ ಮಗನ ಮದುವೆ ನಿಶ್ಚಯಿಸಿದ್ದರು. ಪುರುಷೋತ್ತಮನ್ ಅವರು ಎಲ್ಲಾ ಧರ್ಮದ ಜನರು ವಾಸಿಸುವ ಸ್ಥಳದಲ್ಲಿ ಬೆಳೆದಿದ್ದಾರೆ. ಹಾಗಾಗಿ, ಅವರು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಪದ್ಧತಿಯಂತೆ ಮದುವೆಯಾಗಲು ನಿರ್ಧರಿಸಿದ್ದರು. ಅವರು ವಧುವಿನ ಕುಟುಂಬಕ್ಕೆ ತಮ್ಮ ಆಸೆಯನ್ನು ತಿಳಿಸಿದರು. ಪುರುಷೋತ್ತಮನ್ ಅವರ ಆಸೆಯನ್ನು ಪೂರೈಸಲು ಎರಡೂ ಕುಟುಂಬಗಳು ಒಪ್ಪಿಕೊಂಡು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ಪುರುಷೋತ್ತಮನ್-ಭುವನೇಶ್ವರಿ ಅವರ ವಿವಾಹವು ಮಾರ್ಚ್ 26ರಂದು ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಸಂಪ್ರದಾಯದಲ್ಲಿ ನಡೆಯಿತು. ಮಾರ್ಚ್ 27ರಂದು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ಸಮಾರಂಭ ನಡೆಯಿತು. ನವ ಜೋಡಿಯ ಮಾದರಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Join Whatsapp
Exit mobile version