Home ಕರಾವಳಿ ಈಶ್ವರಪ್ಪನವರ ರಾಜೀನಾಮೆ ಅಲ್ಲ, ಬಂಧನ ಆಗಬೇಕು ಎಂದ ಹಿಂದೂ ಮಹಾಸಭಾ

ಈಶ್ವರಪ್ಪನವರ ರಾಜೀನಾಮೆ ಅಲ್ಲ, ಬಂಧನ ಆಗಬೇಕು ಎಂದ ಹಿಂದೂ ಮಹಾಸಭಾ

ಮಂಗಳೂರು: 40% ಕಮಿಷನ್ ಕೇಳಿ ಮಾನಸಿಕ ಹಿಂಸೆ ನೀಡಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾದ ಈಶ್ವರಪ್ಪನವರ ರಾಜೀನಾಮೆ ಸಾಲದು, ಅವರ ಬಂಧನ ಆಗಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾದ್ಯಕ್ಷ ರಾಜೇಶ್ ಪವಿತ್ರನ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ  ಒತ್ತಾಯಿಸಿದ್ದಾರೆ.

ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿಗೀಡಾದದ್ದು ಹಿಂದೂ. ಅದೂ ಬಿಜೆಪಿ, ಹಿಂದುತ್ವದ ಕಾರ್ಯಕರ್ತ. ಹಿಂದೆ ವಿನಾಯಕ ಬಾಳಿಗಾ ಎಂಬ ಹಿಂದೂ ಕಾರ್ಯಕರ್ತನ ಕೊಲೆಯಾದಾಗಲೂ ಆ ಕುಟುಂಬಕ್ಕೆ  ಬಿಜೆಪಿ ನ್ಯಾಯ ಕೊಡಿಸಿಲ್ಲ. ಬಿಜೆಪಿಯು ಮಂಚ,  ಲಂಚ ಮತ್ತು ಹಿಂದೂ ವಿರೋಧಿ ಸರಕಾರ. ಸಂತೋಷ್ ಪಾಟೀಲ್ ಕೊಲೆಯಾದ ಸ್ಥಳದ ಸಿಸಿಟಿವಿ ದೃಶ್ಯಗಳು ನಾಪತ್ತೆಯಾದ ವರದಿಯಿದೆ. ಚುನಾವಣೆ ಬರುವುದರಿಂದ ಈಶ್ವರಪ್ಪ ರಾಜೀನಾಮೆಯ ನಾಟಕ ಮಾತ್ರ ನಡೆದಿದೆ. ಕೂಡಲೆ ಅವರನ್ನು ಬಂಧಿಸಿ, ಸಂತ್ರಸ್ತ ಕುಟುಂಬವನ್ನು ರಕ್ಷಣೆ ಮಾಡಬೇಕು ಎಂದು ಪವಿತ್ರನ್ ಒತ್ತಾಯ ಮಾಡಿದರು.

ಮೋದಿಯವರು ಅಧಿಕಾರಕ್ಕೆ ಬಂದ ಲಂಚ ಮುಕ್ತ ಭಾರತ ಎಂದರು. ಪತ್ರ ಬರೆದರೂ ಪ್ರಧಾನಿ ಏಕೆ ಪ್ರತಿಕ್ರಿಯಿಸಿಲ್ಲ. ನಾನು ಲಂಚ ಪಡೆದಿಲ್ಲ ಎಂದು ಈಶ್ವರಪ್ಪ ಹೇಳುತ್ತಾರೆ. ಹಾಗಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ. ಹಾಗಾದರೆ 40% ಕಮಿಶನ್ ಪಡೆದವರು ಯಾರು ಎಂದು ಧರ್ಮೇಂದ್ರ ಪ್ರಶ್ನಿಸಿದರು.

ಕಾಮಗಾರಿ ನೀಡಿಲ್ಲ ಎಂದು ಕೂಡ ಈಶ್ವರಪ್ಪ ಹೇಳುತ್ತಾರೆ. ಕಾಂಗ್ರೆಸ್ ನವರದು ಭ್ರಷ್ಟಾಚಾರದ ಸರಕಾರ ಎಂದ ಬಿಜೆಪಿಯವರು  ಭ್ರಷ್ಟಾತಿಭ್ರಷ್ಟ ಸರಕಾರ ನಡೆಸುತ್ತಿದ್ದಾರೆ. ಈಶ್ವರಪ್ಪ ನಿಮ್ಮ ನಾಟಕ ನಿಲ್ಲಿಸಿ. ಹಿಂದೆ ಸಿ. ಕೆ. ಜಾರ್ಜ್ ವಿರುದ್ಧ ಇಂಥ ಪ್ರಕರಣದಲ್ಲಿ ಏನೆಲ್ಲ ಪ್ರತಿಭಟನೆ ನಡೆಸಿರಿ. ಇದರ ಹಿಂದೆ ಈಶ್ವರಪ್ಪ ಕೈವಾಡ ಇದೆ. ಅವರನ್ನು ಮತ್ತು ಇತರ ತಪ್ಪಿತಸ್ಥರನ್ನು ಕೂಡಲೆ ಬಂಧಿಸಬೇಕು ಎಂದು ಧರ್ಮೇಂದ್ರ ಒತ್ತಾಯಿಸಿದರು.

Join Whatsapp
Exit mobile version