Home ಟಾಪ್ ಸುದ್ದಿಗಳು ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟ ಹಿಂದಿ ಕಿರುತೆರೆಯ ಸಿಸ್ಟರ್ಸ್

ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟ ಹಿಂದಿ ಕಿರುತೆರೆಯ ಸಿಸ್ಟರ್ಸ್

ಮುಂಬೈ: ಹಿಂದಿ ಕಿರುತೆರೆಯ ಸ್ಟಾರ್ ಸಿಸ್ಟರ್ಸ್ ಎಂದು ಖ್ಯಾತರಾಗಿದ್ದ ಡಾಲಿ ಸೋಹಿ ಮತ್ತು ಅಮನ್ ದೀಪ್ ಸೋಹಿ ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟಿದ್ದಾರೆ.


ಅಮನ್ ದೀಪ್ ಅವರು ಜಾಂಡಿಸ್ ನಿಂದ ಬಳಲುತ್ತಿದ್ದರೆ, ಡಾಲಿ ಸೋಹಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ಸುದ್ದಿ ಹಿಂದಿ ಕಿರುತೆರೆ ಲೋಕಕ್ಕೆ ಶಾಕ್ ನೀಡಿದೆ.


ಹಲವು ದಿನಗಳಿಂದ ಜಾಂಡಿಸ್ ಗಾಗಿ ಅಮನ್ ದೀಪ್ ಚಿಕಿತ್ಸೆ ಪಡೆಯುತ್ತಿದ್ದರು, ಕೊನೆಗೂ ಅವರಿಗೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಈ ಸುದ್ದಿ ಅವರ ಕುಟುಂಬಕ್ಕೆ ಆಘಾತ ಮೂಡಿಸಿತ್ತು. ನಿನ್ನೆ ಅಮನ್ ದೀಪ್ ನಿಧನರಾದ ಸುದ್ದಿಯನ್ನು ಅವರ ಸಹೋದರ ಬಹಿರಂಗ ಪಡಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲೇ ಡಾಲಿ ಕೂಡ ನಿಧನರಾಗಿದ್ದಾರೆ.


2023ರಲ್ಲಿ ಡಾಲಿ ಗರ್ಭಕಂಠ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಇಂದು ಇಬ್ಬರೂ ಸಹೋದರಿಯರ ಅಂತ್ಯಕ್ರಿಯೆ ನಡೆಯಲಿದೆ.


ಡಾಲಿ ‘ಕಲಶ’, ‘ಹಿಟ್ಲರ್ ದೀದಿ’, ‘ಡೆವೊನ್ ಕೆ ದೇವ್ ಮಹಾದೇವ್’, ‘ಜನಕ್’ ನಂತಹ ಅನೇಕ ಹಿಟ್ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ.

Join Whatsapp
Exit mobile version