Home ರಾಷ್ಟ್ರೀಯ ಇಂಗ್ಲಿಷ್ ಭಾಷೆಗೆ ಹಿಂದಿ ಪರ್ಯಾಯ: ಪ್ರಾದೇಶಿಕ ಭಾಷೆಗಳ ಬಗ್ಗೆ ಅಮಿತ್ ಶಾ ಮತ್ತೆ ‘ಎಡವಟ್ಟು’

ಇಂಗ್ಲಿಷ್ ಭಾಷೆಗೆ ಹಿಂದಿ ಪರ್ಯಾಯ: ಪ್ರಾದೇಶಿಕ ಭಾಷೆಗಳ ಬಗ್ಗೆ ಅಮಿತ್ ಶಾ ಮತ್ತೆ ‘ಎಡವಟ್ಟು’

ನವದೆಹಲಿ: ಪ್ರಾದೇಶಿಕ ಭಾಷೆಯನ್ನು ಸದಾ ಕಡೆಗಣಿಸುವಲ್ಲಿ ಮಹತ್ತರ ಪಾತ್ರ ವಹಿಸುವ ಬಿಜೆಪಿ ಮತ್ತೆ ಎಡವಟ್ಟು ಮಾಡಿದೆ. ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂಗ್ಲಿಷ್ ಭಾಷೆಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು ಎಂದು ಹೇಳಿದ್ದಾರೆ.

ಇಂಗ್ಲಿಷ್ ಭಾಷೆಗೆ ಹಿಂದಿ ಭಾಷೆಯ ಬಳಕೆ ಪರ್ಯಾಯವಾಗಿರಬೇಕು, ಪ್ರಾದೇಶಿಕ ಭಾಷೆಗಳು ಪರ್ಯಾಯವಾಗಬಾರದು ಎಂದು ಅಮಿತ್ ಶಾ ಹೇಳಿದ್ದಾರೆ. ಈ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದ್ದು ತಮಿಳುನಾಡು ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version