ಅಹಮದಾಬಾದ್: ಚುನಾವಣೆಯಲ್ಲಿ ಸೋಲಿನ ಭಯದಿಂದಾಗಿ ರಾಹುಲ್ ಗಾಂಧಿ ಗುಜರಾತ್ಗೆ ಬರುತ್ತಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವ್ಯಂಗ್ಯವಾಡಿದ್ದಾರೆ.
ಅಹಮದಾಬಾದ್ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ಗೆ ರಾಹುಲ್ ಸಂದರ್ಶಕ ಅಧ್ಯಾಪಕರಂತೆ ಬರುತ್ತಾರೆ. ಹಿಮಾಚಲ ಪ್ರದೇಶದಲ್ಲೂ ಪ್ರಚಾರ ಮಾಡಿಲ್ಲ. ಚುನಾವಣೆ ನಡೆಯದ ರಾಜ್ಯಗಳಿಗೆ ಮಾತ್ರ ಭೇಟಿ ಕೊಡುತ್ತಾರೆ. ಬಹುಶಃ ಸೋಲಿನ ಭಯ ಕಾಡುತ್ತಿರಬಹುದು ಎಂದು ಹೇಳಿದರು.
ಭಾರತ್ ಜೋಡೊ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಈಗ ಸದ್ದಾಂ ಹುಸೇನ್ ಅವರಂತೆ ಕಾಣುತ್ತಿದ್ದಾರೆ ಎಂದು ಹಿಮಂತ ಬಿಸ್ವ ಗೇಲಿ ಮಾಡಿದ್ದಾರೆ.