Home ಟಾಪ್ ಸುದ್ದಿಗಳು ಭಾರತದ ಹೆಮ್ಮೆಯ ಕ್ರೀಡಾ ಸಾಧಕಿ ಹಿಮಾ ದಾಸ್ ಗೆ ಡಿಎಸ್ಪಿ ಹುದ್ದೆ ನೀಡಿದ ಅಸ್ಸಾಂ ಸರಕಾರ

ಭಾರತದ ಹೆಮ್ಮೆಯ ಕ್ರೀಡಾ ಸಾಧಕಿ ಹಿಮಾ ದಾಸ್ ಗೆ ಡಿಎಸ್ಪಿ ಹುದ್ದೆ ನೀಡಿದ ಅಸ್ಸಾಂ ಸರಕಾರ

ಗುವಾಹತಿ : ಭಾರತದ ಹೆಮ್ಮೆಯ ಕ್ರೀಡಾ ಸಾಧಕಿ, ಓಟಗಾರ್ತಿ ಹಿಮಾ ದಾಸ್ ಅವರಿಗೆ ಅಸ್ಸಾಂ ಸರಕಾರ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಹುದ್ದೆಯನ್ನು ನೀಡಿದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನವಾಲ್ ಸರಕಾರ ಈ ಬಗ್ಗೆ ನಿರ್ಧಾರ ಕೈಗೊಂಡಿರುವ ಕುರಿತು ಕೇಂದ್ರ ಸಚಿವ ಕಿರಣ್ ರೆಜಿಜು ಟ್ವೀಟ್ ಮಾಡಿದ್ದಾರೆ.

ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಒಂದು ಮತ್ತು ಎರಡನೇ ಶ್ರೇಣಿಯ ಅಧಿಕಾರಿಗಳಾಗಿ ಕ್ರೀಡಾಪಟುಗಳನ್ನು ನೇಮಕ ಮಾಡುವ ಬಗ್ಗೆ ರಾಜ್ಯದ ಸಮಗ್ರ ಕ್ರೀಡಾ ನೀತಿಗೆ ಸಂಪುಟ ತಿದ್ದುಪಡಿ ಮಾಡಲಾಗಿದೆ.

ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್ ಶಿಪ್ ಪದಕ ವಿಜೇತರಿಗೆ ವಿವಿಧ ಹುದ್ದೆಗಳನ್ನು ನೀಡಲಾಗುತಿತ್ತು, ಹಿಮಾ ದಾಸ್ ಅವರನ್ನು ಡಿಎಸ್ಪಿಯಾಗಿ ನೇಮಕ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.

ಸರಕಾರದ ನಿರ್ಧಾರವನ್ನು ಸಚಿವ ಕಿರಣ್ ರೆಜಿಜು ಸ್ವಾಗತಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸತತ ಐದು ಚಿನ್ನದ ಪದಕ ಪಡೆದಿರುವ ಹಿಮಾ ದಾಸ್ ಗೆ 2018ರಲ್ಲಿ ಅರ್ಜುನ ಪ್ರಶಸ್ತಿ ಕೂಡ ಬಂದಿತ್ತು.  

Join Whatsapp
Exit mobile version