ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದುಹೋಗುವ ಎಲ್ಲಾ ರಾಷ್ಟೀಯ ಹೆದ್ದಾರಿಗಳ ಅವ್ಯವಸ್ಥೆ ಸರಿಪಡಿಸಬೇಕು, ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಸೂಕ್ತ ಮೂಲಭೂತ ಸೌಕರ್ಯವನ್ನು ಏರ್ಪಡಿಸಬೇಕು, ಸರ್ವಿಸ್ ರೋಡ್, ದಾರಿ ದೀಪ, ಸಮರ್ಪಕ ನಾಮಫಲಕ ಸೇರಿದಂತೆ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಇನ್ನಿತರ ಸಾರ್ವಜನಿಕ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ನಿಯೋಗವು ಮಂಗಳೂರು ವಿಭಾಗದ ರಾಷ್ಟೀಯ ಹೆದ್ದಾರಿ ಪ್ರಾದಿಕಾರದ ಯೋಜನಾ ನಿರ್ದೇಶಕರು ಮತ್ತು ಹೆದ್ದಾರಿ ಆಡಳಿತಾಧಿಕಾರಿಯಾದ ಅಬ್ದುಲ್ಲಾ ಜಾವಿದ್ ಅಝ್‌ಮಿ ಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಎಸ್ ಡಿಪಿಐ ಸಲ್ಲಿಸಿದ ಮನವಿ ಪತ್ರದಲ್ಲಿ ಉಲ್ಲೇಖಿಸಿದ ಬೇಡಿಕೆ ಈ ಕೆಳಗಿನಂತಿವೆ.
- ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಬ್ರಹ್ಮರಕುಟ್ಲು ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ನಿಲ್ಲಿಸಬೇಕು.
- ರಾಷ್ಟೀಯ ಹೆದ್ದಾರಿ 75 ರಲ್ಲಿ ನಡೆಯುತ್ತಿರುವ ಕಾಮಗಾರಿಯು ನಿದಾನಗತಿಯಲ್ಲಿ ನಡೆಯುತ್ತಿವೆ, ಇದನ್ನು ವೇಗವಾಗಿ ಮಾಡಿ ಮುಂದಿನ ಮಳೆಗಾಲಕ್ಕೂ ಮೊದಲು ಸಾರ್ವಜನಿಕರಿಗೆ ಮುಕ್ತವಾಗಿಸಬೇಕು. ಕಲ್ಲಡ್ಕ ಪೇಟೆಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ ನಿರ್ಮಾಣವನ್ನು ವೇಗವಾಗಿ ಮುಗಿಸಬೇಕು ಮತ್ತು ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಕಲ್ಲಡ್ಕದಲ್ಲಿ ಪ್ರಸ್ತುತ ಸಂಚಾರಕ್ಕೆ ಇರುವ ರಸ್ತೆಯು ಹೊಂಡಗಳಿಂದ ತುಂಬಿದ್ದು, ಕೂಡಲೇ ಇದನ್ನು ಸರಿಪಡಿಸಿ ಅಲ್ಲಿನ ವ್ಯಾಪಾರಿಗಳಿಗೆ ಹಾಗೂ ವಾಹನ ಸಂಚಾರರಿಗೆ ದೂಳು ಮತ್ತು ಕೆಸರಿನಿಂದ ಮುಕ್ತಿ ಹೊಂದಿದ ಸಮರ್ಪಕತಾತ್ಕಾಲಿಕ ರಸ್ತೆಯನ್ನು ನಿರ್ಮಿಸಬೇಕು.
- ಮಳೆಗಾಲದ ಬಳಿಕ ಹೊಂಡ ಬಿದ್ದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಕೂಡಲೇ ಡಾಂಬರು ಹಾಕಿ ಸರಿಪಡಿಸಬೇಕು.
- ಜಿಲ್ಲೆಯಿಂದ ಹಾದು ಹೋಗುವ ಬಹುತೇಕ ಹೆದ್ದಾರಿಗಳಲ್ಲಿ ಸಮರ್ಪಕ ನಾಮಫಲಕ ಇಲ್ಲದೇ ದೂರದ ಊರಿನಿಂದ ಬರುವ ವಾಹನ ಸವಾರರಿಗೆ ಸಮಸ್ಯೆ ಆಗುತ್ತಿದೆ. ಇದನ್ನು ಕೂಡಲೇ ಗಂಭೀರವಾಗಿ ತೆಗೆದುಕೊಂಡು ಸ್ಪಷ್ಟವಾದ ನಾಮಫಲಕಗಳನ್ನು ಅಳವಡಿಸಬೇಕು.
- ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಹೆದ್ದಾರಿಗಳಲ್ಲಿ 24×7 ಆಂಬುಲೆನ್ಸ್, ಕ್ರೇನ್ ಮತ್ತು ಶೌಚಾಲಯಗಳ ವ್ಯವಸ್ತೆ ಮಾಡಬೇಕು
- ಚತುಷ್ಪದ ಕಾಮಗಾರಿ ನಡೆಯುತ್ತಿರುವ ನೆಲ್ಯಾಡಿ ಮತ್ತು ಮೆಲ್ಕಾರ್ ಗಳಲ್ಲಿ ತಡೆಗೋಡೆ ಯಿಂದ ಅಲ್ಲಿನ ಪೇಟೆಯು ಅಸ್ತಿತ್ವ ಇಲ್ಲದಂತಾಗಿದೆ. ಇದನ್ನು ಗಂಬೀರವಾಗಿ ಪರಿಗಣಿಸಿ ಅಲ್ಲಿನ ನಾಗರಿಕರ ಬೇಡಿಕೆಯಂತೆ ಕನಿಷ್ಟವಾದರೂ ಮೇಲ್ಸೇತುವೆ ನಿರ್ಮಿಸಬೇಕು.
- ಹೆದ್ದಾರಿ ಹಾದು ಹೋಗುವ ಗ್ರಾಮಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ಬಸ್ಸು ತಂಗುದಾನವನ್ನು ನಿರ್ಮಿಸಬೇಕು.
- ಮಂಗಳೂರಿನಿಂದ ಸಾಣೂರು
ವರೆಗಿನ ರಾಷ್ಟೀಯ ಹೆದ್ದಾರಿ 169 ರ ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿದ್ದು, ಇದನ್ನು ತ್ವರಿತಗತಿಯಲ್ಲಿ ಮಾಡಿ ಮುಗಿಸಲು ಕ್ರಮ ಕೈಗೊಳ್ಳಬೇಕು
- 169 ಹೆದ್ದಾರಿಯ ಭೂಸ್ವಾದ್ವೀನ ಪ್ರಕ್ರಿಯೆಯಲ್ಲಿ ನಡೆದ ಭ್ರಷ್ಟಾಚಾರ ಮತ್ತು ತಾರತಮ್ಯ ವಿರುದ್ದ ಸೂಕ್ಮ ನಿರ್ಧಾರ ಕೈಗೊಳ್ಳಬೇಕು.
- ಹೊಸ ಹೆದ್ದಾರಿಗಳಲ್ಲಿ ಕನಿಷ್ಟ 60 ಕಿ.ಮೀ ಮೀಟರ್ ಆಗದೇ ಟೋಲ್‌ಗೇಟ್ ನಿರ್ಮಾಣ ಮಾಡಬಾರದು.
- ಹೆದ್ದಾರಿಯ ಜನನಿಬಿಡ ಪ್ರದೇಶಗಳು ಮತ್ತು ಶಾಲಾ ಕಾಲೇಜುಗಳ ಸಮೀಪ ಝೀಬ್ರಾ ಕ್ರಾಸ್ ಮತ್ತು ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕು.
- ಕೈಗಾರಿಕಾ ವಲಯ ಮತ್ತು ನವ ಮಂಗಳೂರು ಬಂದರು ಪ್ರದೇಶವಾದ ಕೂಳೂರು ನಿಂದ ಬೈಕಂಪಾಡಿ ವರೆಗೆ ಚತುಷ್ಪದ ಮೇಲ್ಸೇತುವೆ ನಿರ್ಮಿಸಬೇಕು.
ಮುಂತಾದ ಹಲವಾರು ಬೇಡಿಕೆಗಳನ್ನು ಜಿಲ್ಲೆಯ ಸಾರ್ವಜನಿಕರ ಪರವಾಗಿ SDPI ಹೆದ್ದಾರಿ ಇಲಾಖೆಯ ಯೋಜನಾಧಿಕಾರಿ ಗಳ ಮೂಲಕ ಸರಕಾರಕ್ಕೆ ಸಲ್ಲಿಸಲಾಗಿದೆ,ಈ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಬಗೆ ಹರಿಸಲು ಕ್ರಮ ಕೈಗೊಳ್ಳುವುದಾಗಿ ಯೋಜನಾ ನಿರ್ಧೇಶಕರು ಪಕ್ಷದ ನಾಯಕರಿಗೆ ಭರವಸೆ ನೀಡಿದ್ದಾರೆ ಅಧಿಕಾರಿಗಳನ್ನು ಬೇಟಿಯಾದ ನಿಯೋಗದಲ್ಲಿ SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಉಸ್ಮಾನ್ ಗುರುಪುರ, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಅಕ್ಬರ್ ರಾಝಾ ನಿಯೋಗದಲ್ಲಿದ್ದರು