Home ಟಾಪ್ ಸುದ್ದಿಗಳು ಏಪ್ರಿಲ್ 1ರಿಂದ ಮತ್ತೆ‌‌ ದುಬಾರಿಯಾಗಲಿರುವ ಹೆದ್ದಾರಿ ಸುಂಕ ದರ

ಏಪ್ರಿಲ್ 1ರಿಂದ ಮತ್ತೆ‌‌ ದುಬಾರಿಯಾಗಲಿರುವ ಹೆದ್ದಾರಿ ಸುಂಕ ದರ

ಎನ್ಎಚ್- ರಾಷ್ಟ್ರೀಯ ಹೆದ್ದಾರಿ ಮತ್ತು ಇಡಬ್ಲ್ಯು- ಎಕ್ಸ್‌ಪ್ರೆಸ್‌ ವೇ (ದೌಡು ರೋಡು) ಗಳ ಟೋಲ್ ಪ್ರತಿ ವರ್ಷ ಮರು ಪರಿಶೀಲನೆ ಆಗುತ್ತದೆ. ಈ ಬಾರಿ ಹೆದ್ದಾರಿ ಸುಂಕ ಏರಿಸಲು ಎನ್ಎಚ್ಎಐ- ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಿಐಯು- ಯೋಜನೆ ಅನುಷ್ಠಾನ ಘಟಕವು ತೀರ್ಮಾನಿಸಿದೆ.

ಮಾರ್ಚ್ 25ರೊಳಗೆ ಪಿಐಯು ಪರಿಷ್ಕೃತ ದರವನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಿದ್ದು, ಹೊಸ ದರವು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

ರಾಷ್ಟ್ರೀಯ ಹೆದ್ದಾರಿ ಮತ್ತು ದೌಡು ರೋಡುಗಳ ಸುಂಕವನ್ನು 5ರಿಂದ 10 ಶೇಕಡಾ ಏರಿಸಲು ಯೋಜಿಸಲಾಗಿದೆ. 20 ಕಿಮೀ ಒಳಗಿನವರಿಗೆ ನೀಡುವ ಮಾಸಿಕ ಪಾಸು ದರ ಕೂಡ ಈಗ ತಿಂಗಳಿಗೆ ರೂ. 315 ಇರುವುದು 350 ಮುಟ್ಟಲಿದೆ. ಹಾಗೆಯೇ ಇತರ ಸುಂಕವನ್ನು ಕೂಡ 5ರಿಂದ 10 ಶೇಕಡಾ ಏರಿಸಲಾಗುತ್ತಿದೆ.

Join Whatsapp
Exit mobile version