Home ಟಾಪ್ ಸುದ್ದಿಗಳು ಹಿಜಾಬ್ ಕುರಿತಾದ ಹೈಕೋರ್ಟ್ ತೀರ್ಪು ಪ್ರಶ್ನಾತೀತವಲ್ಲ: ಯಾಸಿರ್ ಹಸನ್

ಹಿಜಾಬ್ ಕುರಿತಾದ ಹೈಕೋರ್ಟ್ ತೀರ್ಪು ಪ್ರಶ್ನಾತೀತವಲ್ಲ: ಯಾಸಿರ್ ಹಸನ್

ಬೆಂಗಳೂರು: ಮುಸ್ಲಿಮ್ ವೈಯಕ್ತಿಕ ಕಾನೂನು ಮತ್ತು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಆಯ್ಕೆಯ ಸ್ವಾತಂತ್ರ್ಯದ ವಿರುದ್ಧ ನೀಡಿದ ಹಿಜಾಬ್ ಕುರಿತಾದ ಹೈಕೋರ್ಟ್ ತೀರ್ಪು ಪ್ರಶ್ನಾತೀತವಲ್ಲ. ಮುಸ್ಲಿಮ್ ಸಮುದಾಯಕ್ಕೆ ಹಕ್ಕನ್ನು ನಿರಾಕರಿಸುವ ರಾಜಕೀಯಪ್ರೇರಿತವಾದ ಇಂತಹ ಅನ್ಯಾಯದ ತೀರ್ಪುಗಳು ಸಂವಿಧಾನದ ಮೌಲ್ಯಗಳನ್ನೇ ಬುಡಮೇಲುಗೊಳಿಸಲಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹೈಕೋರ್ಟ್ ತೀರ್ಪು ಅನ್ಯಾಯದ ತೀರ್ಪಾಗಿದೆ. ಮುಸ್ಲಿಮ್ ಸಮುದಾಯಕ್ಕೆ ಹಕ್ಕನ್ನು ನಿರಾಕರಿಸುವ ರಾಜಕೀಯಪ್ರೇರಿತವಾದ ಇಂತಹ ಅನ್ಯಾಯದ ತೀರ್ಪುಗಳು ಸಂವಿಧಾನದ ಮೌಲ್ಯಗಳನ್ನೇ ಬುಡಮೇಲುಗೊಳಿಸಲಿದೆ ಎಂದು ಹೇಳಿದ್ದಾರೆ.

“ಕರ್ನಾಟಕ ಹೈಕೋರ್ಟ್ ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಿದೆ. ಸಂವಿಧಾನದ ವಿರುದ್ಧದ ತೀರ್ಪನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ವೈಯಕ್ತಿಕ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನಗಳ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತೇವೆ. ಈ ಸಾಂವಿಧಾನಿಕ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ನಾವು ಜಾತ್ಯತೀತರಿಗೆ ಮನವಿ ಮಾಡುತ್ತೇವೆ”  ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಎಸ್. ಸಾಜಿದ್ ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version