Home ಟಾಪ್ ಸುದ್ದಿಗಳು ಖಾಸಗಿ ಆಸ್ಪತ್ರೆಗಳ ಕೋವಿಡ್ ದರಪಟ್ಟಿ ಸಾರಿಗೆ ಬಸ್ ಗಳ ಮೇಲೆ ಪ್ರಕಟಿಸಿ | ಹೈಕೋರ್ಟ್

ಖಾಸಗಿ ಆಸ್ಪತ್ರೆಗಳ ಕೋವಿಡ್ ದರಪಟ್ಟಿ ಸಾರಿಗೆ ಬಸ್ ಗಳ ಮೇಲೆ ಪ್ರಕಟಿಸಿ | ಹೈಕೋರ್ಟ್

ಬೆಂಗಳೂರು : ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ನಿಗದಿಪಡಿಸಿರುವ ದರದ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಸಾಧ್ಯವಾದರೆ ಸಾರಿಗೆ ಸಂಸ್ಥೆ ಬಸ್‌ಗಳ ಮೇಲೆ ದರ ಪಟ್ಟಿ ಪ್ರಕಟಿಸುವಂತೆ ತಿಳಿಸಿದೆ.

ಕೋವಿಡ್‌ ಸಂಬಂಧಿಸಿದ ವಿಷಯಗಳ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಅರವಿಂದಕುಮಾರ್ ನೇತೃತ್ವದ ವಿಭಾಗೀಯ ಪೀಠ, ಈ ಸೂಚನೆ ನೀಡಿದೆ.ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರವನ್ನು ಕೆಲ ಆಸ್ಪತ್ರೆಗಳಲ್ಲಿ ಪಡೆಯಲಾಗುತ್ತಿದೆ. ತಿಳಿವಳಿಕೆ ಕೊರತೆಯಿಂದ ಜನ ಕೂಡ ಕೇಳಿದಷ್ಟು ಹಣ ಪಾವತಿಸುತ್ತಿದ್ದಾರೆ’ ಎಂದು ಅರ್ಜಿದಾರರು ಆರೋಪಿಸಿದರು. ‘ದರ ಪಟ್ಟಿ ಬಗ್ಗೆ ಪ್ರಚಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಸಲ್ಲಿಸಿ’ ಎಂದು ಸರ್ಕಾರಕ್ಕೆ ಪೀಠ ಆದೇಶಿಸಿತು.

ಸೆಪ್ಟೆಂಬರ್‌ಗೆ 22.5 ಲಕ್ಷ ಡೋಸ್ ಕೋವಿಡ್ ಲಸಿಕೆ ಲಭ್ಯವಿದೆ. ಎರಡನೇ ಅಲೆಯಷ್ಟೇ ತೀವ್ರವಾಗಿ ಮೂರನೇ ಅಲೆ ಬಂದರೆ 1,200 ಟನ್ ಆಮ್ಲಜನಕದ ಅಗತ್ಯವಿದೆ ಎಂದು ಸರ್ಕಾರ ತಿಳಿಸಿದೆ.

Join Whatsapp
Exit mobile version