Home ಟಾಪ್ ಸುದ್ದಿಗಳು ರಾಕ್​​ಲೈನ್ ಒಡೆತನದ ಮಾಲ್‌ನ ಬೀಗಮುದ್ರೆ ತೆರವಿಗೆ ಹೈಕೋರ್ಟ್​ ಸೂಚನೆ

ರಾಕ್​​ಲೈನ್ ಒಡೆತನದ ಮಾಲ್‌ನ ಬೀಗಮುದ್ರೆ ತೆರವಿಗೆ ಹೈಕೋರ್ಟ್​ ಸೂಚನೆ

ಬೆಂಗಳೂರು: ತೆರಿಗೆ ಕಟ್ಟದಿದ್ದ ಕಾರಣ ನೀಡಿ ಬಿಬಿಎಂಪಿ ಅಧಿಕಾರಿಗಳು ಚಿತ್ರ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಮಾಲಕತ್ವದ ರಾಕ್​​ಲೈನ್ ಮಾಲ್ ಬೀಗಮುದ್ರೆ ಜಡಿದಿದ್ದರು. ಈಗ ಬೀಗ ತೆರವಿಗೆ ಹೈಕೋರ್ಟ್​ ಸೂಚನೆ ನೀಡಿದೆ.

ಟಿ.ದಾಸರಹಳ್ಳಿಯ ಪ್ರಶಾಂತ್ ನಗರದಲ್ಲಿರುವ ಮಾಲ್​ 2011 ರಿಂದ 2023ರವರೆಗೆ 11.51 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿಯೂ ಬಾಕಿ ಪಾವತಿಸದ ಹಿನ್ನೆಲೆ ಮಾಲ್​​ಗೆ ಬೀಗ ಹಾಕಲಾಗಿತ್ತು.

ಆದರೆ ರಾಕ್​ಲೈನ್ ಮಾಲ್ ಮ್ಯಾನೇಜರ್ ಪ್ರಕಾಶ್, ನಮಗೆ ನೋಟಿಸ್ ಕೊಡದೇ ಮಾಲ್​ಗೆ ಬೀಗ ಹಾಕಿದ್ದಾರೆ ಎಂದು ಹೇಳಿದ್ದರು.

ಬಿಬಿಎಂಪಿ ಆದೇಶ ಪ್ರಶ್ನಿಸಿ ರಾಕ್​ಲೈನ್ ವೆಂಕಟೇಶ್​ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಅರ್ಜಿದಾರರಿಗೆ ಅವಕಾಶ ನೀಡಿ ರಿಟ್ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.

Join Whatsapp
Exit mobile version