Home ಟಾಪ್ ಸುದ್ದಿಗಳು ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಸಾವನ್ನಪ್ಪಿದ ಸ್ಟ್ಯಾನ್ ಸ್ವಾಮಿ ಬಗ್ಗೆ ಹೈಕೋರ್ಟ್ ಗೌರವದ ಮಾತು !

ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಸಾವನ್ನಪ್ಪಿದ ಸ್ಟ್ಯಾನ್ ಸ್ವಾಮಿ ಬಗ್ಗೆ ಹೈಕೋರ್ಟ್ ಗೌರವದ ಮಾತು !

ಮುಂಬೈ: ಭೀಮಾ ಕೋರೆಗಾಂವ್- ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗಲೇ ಮೃತಪಟ್ಟ ಪಾದ್ರಿ ಸ್ಟ್ಯಾನ್ ಸ್ವಾಮಿ ಅವರ ಬಗ್ಗೆ ಸೋಮವಾರ ಬಾಂಬೆ ಹೈಕೋರ್ಟ್ ಅಪಾರ ಗೌರವದ ಮಾತನ್ನಾಡಿದೆ.

ಸ್ವಾಮಿ ಅವರು ಈ ಹಿಂದೆ ಸಲ್ಲಿಸಿದ್ದ ಮೇಲ್ಮನವಿಗಳನ್ನು ಸೋಮವಾರ ಆಲಿಸಿದ ಬಾಂಬೆ ಹೈಕೋರ್ಟ್, ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಸ್ವಾಮಿ ಅವರು “ಅದ್ಭುತ ವ್ಯಕ್ತಿ” ಮತ್ತು ನ್ಯಾಯಾಲಯವು ಅವರ ಕಾರ್ಯಗಳ ಬಗ್ಗೆ “ಅಪಾರ ಗೌರವ” ಹೊಂದಿದೆ ಎಂದು ಪ್ರಶಂಸಿಸಿದೆ.

ಎಲ್ಗಾರ್ ಪರಿಷತ್, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ UAPA ಅಡಿಯಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿಯೇ ಸ್ಟ್ಯಾನ್ ಸ್ವಾಮಿ ಅವರು ಸಾವನ್ನಪ್ಪಿದ್ದರು. ಸ್ಟ್ಯಾನ್ ಸ್ವಾಮಿ ಅವರ ಸಾವಿನ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ನ್ಯಾಯಾಂಗದ ವಿರುದ್ಧ ವ್ಯಕ್ತವಾಗಿರುವ ಆಕ್ರೋಶ, ಟೀಕೆಗಳನ್ನೂ ನ್ಯಾಯಪೀಠ ವಿಚಾರಣೆ ವೇಳೆ ಉಲ್ಲೇಖಿಸಿದೆ. ಜುಲೈ 23 ರಂದು ಹೈಕೋರ್ಟ್ ಮುಂದಿನ ವಿಚಾರಣೆ ನಡೆಸಲಿದೆ.

ಜುಲೈ 5 ರಂದು ಸ್ಟ್ಯಾನ್ ಸ್ವಾಮಿಯ ವೈದ್ಯಕೀಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎನ್.ಜೆ.ಜಮದಾರ್ ಅವರ ನ್ಯಾಯಪೀಠ ಈ ಅಭಿಪ್ರಾಯ ನೀಡಿದೆ.
ಕಾನೂನುಬದ್ಧವಾಗಿ, ಸ್ಟ್ಯಾನ್ ಸ್ವಾಮಿ ಅವರ ವಿರುದ್ಧ ಏನೇ ಇರಲಿ ಅದು ಬೇರೆ ವಿಷಯ. ಆದರೆ, ಅವರು ಅದ್ಭುತ ವ್ಯಕ್ತಿ. ಅವರು ಸಮಾಜಕ್ಕೆ ಸೇವೆ ಸಲ್ಲಿಸಿರುವ ರೀತಿಗೆ, ಅವರ ಕೆಲಸದ ಬಗ್ಗೆ ನಮಗೆ ಅಪಾರ ಗೌರವವಿದೆ” ಎಂದು ನ್ಯಾಯಮೂರ್ತಿ ಶಿಂಧೆ ಹೇಳಿದ್ದಾರೆ.

Join Whatsapp
Exit mobile version