ಜಾರಕಿಹೊಳಿ, ಯತ್ನಾಳ್ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ: ಆರ್. ಅಶೋಕ್

Prasthutha|

ಬೆಂಗಳೂರು: ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಾನು ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -


ಆ ಹೇಳಿಕೆಯನ್ನು ನಾನು ಗಮನಿಸಿಲ್ಲ. ನಾನು ನಿನ್ನೆ ಬೆಂಗಳೂರಿನಲ್ಲಿ ಇರಲಿಲ್ಲ, ಹೈದರಾಬಾದ್ ಗೆ ಹೋಗಿದ್ದೆ. ಅದು ವಿಜಯೇಂದ್ರ ಮತ್ತು ರಮೇಶ್ ಜಾರಕಿಹೊಳಿ ಅವರ ನಡುವಿರುವ ಗಲಾಟೆ. ಅದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದಿದ್ದಾರೆ.


ಆರ್ಎಸ್ಎಸ್ ಸಭೆ ಬಳಿಕವೂ ಬಿ.ವೈ. ವಿಜಯೇಂದ್ರ ಮತ್ತು ರಮೇಶ್ ಜಾರಕಿಹೊಳಿ ಅವರ ನಡುವೆ ವ್ಯತ್ಯಾಸ ಮುಂದುವರಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಆರ್. ಅಶೋಕ್, ಆರ್ ಎಸ್ ಎಸ್ ನಿರ್ದೇಶನ ಕೊಟ್ಟಿದೆ ಎಂಬ ರೀತಿಯ ಘಟನೆ ನಡೆದಿಲ್ಲ. ನಾನು ರಾಜಕಾರಣಿಗಿಂತ ಮೊದಲು ಆರ್ ಎಸ್ ಎಸ್ ಸ್ವಯಂಸೇವಕ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಕೇಂದ್ರ ಸರ್ಕಾರದ ಸಂಪರ್ಕದಲ್ಲಿದ್ದಾರೆ. ಅವರ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಯುತ್ತಿದೆ, ಇದು ಇಂದಿನ ಸಮಸ್ಯೆ ಅಲ್ಲ. ಹೈಕಮಾಂಡ್ ಹೇಳಿದಂತೆ ನಡೆಯುತ್ತೇನೆ ಅಂತಾ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅದು ಅವರಿಬ್ಬರ ನಡುವೆ ಇರುವ ವಿಚಾರ, ನಮ್ಮದೇನೂ ಪಾತ್ರ ಇಲ್ಲ. ಕೇಂದ್ರದ ನಾಯಕರು ಅದರ ಬಗ್ಗೆ ಗಮನ ಕೊಡ್ತಾರೆ ಎಂದು ಆರ್.ಅಶೋಕ್ ಹೇಳಿದ್ದಾರೆ.



Join Whatsapp
Exit mobile version