ಬೈರೂತ್: ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ, ಇಸ್ರೇಲ್ ಸೇನೆಯನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ್ದೇವೆ ಎಂದು ಹಿಜ್ಬುಲ್ಲಾ ಹೇಳಿಕೊಂಡಿದೆ.
ದಕ್ಷಿಣ ಟೆಲ್ ಅವಿವ್ ನಲ್ಲಿರುವ ಇಸ್ರೇಲ್ ವಾಯುನೆಲೆ ಮೇಲೆ ಡ್ರೋನ್ ದಾಳಿ ನಡೆಸಿದ್ದೇವೆ ಎಂದು ಹಿಜ್ಬುಲ್ಲಾ ಹೇಳಿದೆ.
ಐತಾ ಅಲ್ ಸಹಾಬ್ ನ ಹೊರವಲಯದಲ್ಲಿರುವ ಇಸ್ರೇಲ್ ಪಡೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ’ ಎಂದು ಹಿಜ್ಬುಲ್ಲಾ ಪ್ರಕಟಣೆಯಲ್ಲಿ ತಿಳಿಸಿದೆ. ಇಲ್ಲಿ ಕಳೆದ ಎರಡು ವಾರದಿಂದ ಇಸ್ರೇಲ್ ಪಡೆಗಳು ಬೀಡು ಬಿಟ್ಟಿವೆ.
ಇಸ್ರೇಲ್ ದಾಳಿಯನ್ನು ಇರಾನ್ ನ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ತಡೆದಿದೆ. ಆದರೆ ಕೆಲವು ಸ್ಥಳಗಳಿಗೆ ಸೀಮಿತ ಹಾನಿಯಷ್ಟೇ ಉಂಟಾಗಿದೆ ಎಂದು ಇರಾನ್ ಹೇಳಿದೆ.
ಇಸ್ರೇಲ್ ಪಡೆಯು ಇರಾನ್ ನಲ್ಲಿನ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಶನಿವಾರ ಮುಂಜಾನೆ ದಾಳಿಗಳನ್ನು ನಡೆಸಿತ್ತು. ಇಸ್ರೇಲ್ ದಾಳಿಗಳು ಇಲಾಮ್, ಖುಜೆಸ್ತಾನ್ ಮತ್ತು ಟೆಹ್ರಾನ್ ಪ್ರಾಂತ್ಯಗಳಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿದೆ ಎಂದು ಇರಾನ್ ನ ಮಿಲಿಟರಿ ದೃಢಪಡಿಸಿತ್ತು.