Home ಟಾಪ್ ಸುದ್ದಿಗಳು ಸಂಸದರು ಕಾಣೆಯಾಗಿದ್ದಾರೆ! : ಸನ್ನಿ ಡಿಯೊಲ್‌, ಹೇಮಾ ಮಾಲಿನಿ ಪೋಸ್ಟರ್‌ ಹಿಡಿದು ಮತದಾರರಿಂದ ಪ್ರತಿಭಟನೆ

ಸಂಸದರು ಕಾಣೆಯಾಗಿದ್ದಾರೆ! : ಸನ್ನಿ ಡಿಯೊಲ್‌, ಹೇಮಾ ಮಾಲಿನಿ ಪೋಸ್ಟರ್‌ ಹಿಡಿದು ಮತದಾರರಿಂದ ಪ್ರತಿಭಟನೆ

ಗುರುದಾಸ್‌ ಪುರ : ಕೋವಿಡ್‌ ಸೋಂಕಿನ ಈ ಸಂಕಷ್ಟದ ಸಮಯದಲ್ಲಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದ ಬಿಜೆಪಿ ಸಂಸದರಾಗಿರುವ ಬಾಲಿವುಡ್‌ ನಟಿ ಹೇಮಾ ಮಾಲಿನಿ, ನಟ ಸನ್ನಿ ಡಿಯೊಲ್‌ ನಾಪತ್ತೆಯಾಗಿದ್ದಾರೆ ಎಂದು ಅವರ ಲೋಕಸಭಾ ಕ್ಷೇತ್ರಗಳ ನಿವಾಸಿಗಳು ದೂರಿದ್ದಾರೆ. ಈ ಬಗ್ಗೆ ಅವರು ಪೋಸ್ಟರ್‌ ಗಳನ್ನು ಪ್ರದರ್ಶಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಸನ್ನಿ ಡಿಯೊಲ್‌ ಪ್ರತಿನಿಧಿಸುವ ಪಂಜಾಬ್‌ ನ ಗುರುದಾಸ್‌ ಪುರದಲ್ಲಿ ಒಂದು ವರ್ಷದಿಂದ ಕಾಣಿಸಿಕೊಂಡೇ ಇಲ್ಲ ಎಂದು ಅವರ ಕ್ಷೇತ್ರದ ಮತದಾರರು ಆರೋಪಿಸಿದ್ದಾರೆ. ಅವರ ಭಾವಚಿತ್ರವನ್ನು ಹಾಕಿ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್‌ ಗಳನ್ನು ಪ್ರದರ್ಶಿಸಿದ್ದಾರೆ.

ಮತ್ತೊಂದೆಡೆ ಸಂಸದೆ ಹೇಮಾ ಮಾಲಿನಿ ಅವರೂ ತಮ್ಮ ಲೋಕಸಭಾ ಕ್ಷೇತ್ರವನ್ನು ಮರೆತುಬಿಟ್ಟಿದ್ದಾರೆ ಎಂದು ಮಥುರಾ ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ.

Join Whatsapp
Exit mobile version