Home ರಾಜ್ಯ ‘ಕಾನೂನಿ ಅಡಿಯಲ್ಲಿ ಸಹಾಯ ಮಾಡಿ’: ಡಿಕೆಶಿ ಬಳಿ ವಿಜಯಲಕ್ಷ್ಮಿ ಮನವಿ

‘ಕಾನೂನಿ ಅಡಿಯಲ್ಲಿ ಸಹಾಯ ಮಾಡಿ’: ಡಿಕೆಶಿ ಬಳಿ ವಿಜಯಲಕ್ಷ್ಮಿ ಮನವಿ

ಬೆಂಗಳೂರು: ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್’ನಲ್ಲಿ ಅರೆಸ್ಟ್ ಆಗಿದ್ದಾರೆ.


ಇಂದು (ಜುಲೈ 24) ಬೆಳಿಗ್ಗೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರು ಬೆಂಗಳೂರಿನ ಸದಾಶಿವ ನಗರದಲ್ಲಿ ಇರುವ ಡಿಕೆಶಿ ಮನೆಗೆ ತೆರಳಿದ್ದಾರೆ. ಈ ಭೇಟಿ ವೇಳೆ ಅನೇಕ ರೀತಿಯ ಚರ್ಚೆಗಳು ನಡೆದಿವೆ.


ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆದಿದೆ. ದರ್ಶನ್ ಪ್ರಕರಣದ ಕುರಿತು ಕೆಲಕಾಲ ಚರ್ಚೆಗಳು ನಡೆದಿವೆ. ಕಾನೂನು ಚೌಕಟ್ಟಿನಲ್ಲಿ ಸಹಾಯ ಮಾಡಲು ವಿಜಯಲಕ್ಷ್ಮೀ ಮನವಿ ಮಾಡಿಕೊಂಡಿದ್ದಾರೆ. ‘ದರ್ಶನ್ ಜೈಲಿಗೆ ಹೋಗಿ ತಿಂಗಳಾಗಿದೆ, ಇನ್ನೂ ಬೇಲ್ ಸಿಕ್ಕಿಲ್ಲ. ಕಾನೂನಿ ಅಡಿಯಲ್ಲಿ ಏನಾದರೂ ಸಹಾಯ ಮಾಡಿ’ ಎಂದು ಡಿಕೆಶಿ ಬಳಿ ವಿಜಯಲಕ್ಷ್ಮೀ ಮನವಿ ಮಾಡಿಕೊಂಡಿದ್ದಾರೆ.

Join Whatsapp
Exit mobile version